ಅಗ್ನಿ ಅವಘಡ: ಜೀವಂತ ಸಾವು

Share on facebook
Share on twitter
Share on linkedin
Share on whatsapp
Share on email

ಶ್ರೀನಗರ,: ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ದಂಪತಿ ಹಾಗೂ ಅವರ ಪುತ್ರಿಯೊಬ್ಬರು ಜೀವಂತ ಬೆಂದು ಹೋಗಿರುವ ಹೃದಯವಿದ್ರಾವಕ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಶೇಷಗಿರಿ ಮೊಹಲ್ಲಾದ ಮನೆತಲ್ಲಿಲ್ಲಿ ದುರಂತ ಸಂಭವಿಸಿದೆ. ಅಗ್ನಿ ಇಡೀ ಮನೆಯನ್ನು ವ್ಯಾಪಿಸಿದ್ದು, ಜಾವೆದ್ ಅಹ್ಮದ್, ಪತ್ನಿ ಸೋಫಿಯಾ ಜಾವೆದ್ ಹಾಗೂ ಪುತ್ರಿ ಹಫ್ಸಾ ಹೊರಬರಲು ಸಾಧ್ಯವಾಗದೆ ಬೆಂದು ಹೋಗಿದ್ದಾರೆ.

ಬೆಂಕಿಯಲ್ಲಿ ತಂದೆ, ತಾಯಿ, ಮಗಳು ಮೂವರೂ ಸುಟ್ಟುಹೋಗಿದ್ದಾರೆ. ಅವಘಡಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter