ಎಸ್ಟಿ ಮೀಸಲಾತಿ ಹೆಚ್ಚಳ ಬೇಡಿಕೆ ನ್ಯಾ.ನಾಗಮೋಹನ್ ವರದಿ ಬಳಿಕ  ಕ್ರಮ

ಎಸ್ಟಿ ಮೀಸಲಾತಿ ಹೆಚ್ಚಳ ಬೇಡಿಕೆ ನ್ಯಾ.ನಾಗಮೋಹನ್ ವರದಿ ಬಳಿಕ ಕ್ರಮ


ಬೆಂಗಳೂರು : ವಾಲ್ಮೀಕಿ ಸಮುದಾಯದ ಮೀಸಲಾತಿ ಹಚ್ಚಳ ಕುರಿತು ಆದಷ್ಟು ಬೇಗ ವರದಿ ಕೊಡಲು ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಸೂಚಿಸುತ್ತೇನೆ.ಸರ್ಕಾರ ಈ ವಿಷಯದಲ್ಲಿ ಯಾವುದೇ ವಿಳಂಬನೀತಿ ಅನುಸರಿಸುವುದಿಲ್ಲ ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.


ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವ ದಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿ ಹಚ್ಚಳ ಸಂಬಂಧ ಸಭೆ ನಡೆಯಿತು.ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಚಿವ ಶ್ರೀರಾಮುಲು, ಶಾಸಕ ರಮೇಶ್ ಜಾರಕಿ ಹೊಳಿ, ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ಜೆ ಎನ್ ಗಣೇಶ್, ಸಂಸದ ದೇವೇಂದ್ರಪ್ಪ, ಶಾಸಕ ರಾಜುಗೌಡ, ಸೇರಿ ಹಲವರು ಭಾಗಿಯಾಗಿದ್ದರು.

ಸಭೆ ಆರಂಭಗೊಳ್ಳುತ್ತಿದ್ದಂತೆ ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕು,ಅದು ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ಹೆಚ್ಚಿಸಬೇಕು,ನಮ್ಮ ಸಮುದಾಯ ಮೀಸಲಾತಿಗೆ ಅರ್ಹವಾಗಿದೆ. ಸಮುದಾಯ ಜನಸಂಖ್ಯೆ ಕೂಡ ಜಾಸ್ತಿ ಇದೆ ಹೀಗಾಗಿ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿ, ಶೇಕಡಾ 7.5ರಷ್ಟು ಮೀಸಲಾತಿ ಕೊಡಿ ಎಂದು ಸಭೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಪ್ರಸ್ತಾಪ ಮಾಡಿದರು. ನಮ್ಮ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ಕೊಡಬೇಕ, ಜೊತೆಗೆ ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡ ಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲ ಯಕ್ಕೆ ಮಹರ್ಷಿ ವಾಲ್ಮೀಕಿಯ ಹೆಸರಿಡಬೇಕು,ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೊದಲು ಮಹರ್ಷಿ ವಾಲ್ಮೀಕಿಯ ಮಂದಿರ ನಿರ್ಮಾಣ ಮಾಡಬೇಕು ಎಂದು ಸಭೆಯಲ್ಲಿ ಬೇಡಿಕೆಗಳನ್ನು ಮುಖಂಡರು ಪ್ರಸ್ತಾಪಿಸಿದರು.

ನಂತರ ವಾಲ್ಮೀಕಿ ಸಮಾಜದ ಮೀಸಲಾತಿಗೆ ಸಂಬಂಧಿಸಿದಂತೆ ರಚಿಸಲಾಗಿರೋ ನ್ಯಾ.ನಾಗಮೋಹನ್ ದಾಸ್ ಕಮಿ ಟಿಗೆ ಆದಷ್ಟು ಬೇಗ ವರದಿ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಎಲ್ಲಾ ಸ್ವಾಮೀಜಿಯವರು ಹಾಗು ಮುಖಂಡರು ಒತ್ತಾಯ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಎಲ್ಲಾ ಇಲಾಖೆಗಳಿಗೆ ನ್ಯಾ.ನಾಗಮೋಹನ್ ದಾಸ್ ಆಯೋಗ ಕೇಳಿದ ಎಲ್ಲಾ ಮಾಹಿತಿ ಮತ್ತು ದತ್ತಾಂಶವನ್ನು ನೀಡಲು ಅಧಿಕಾರಿಗಳಿಗೆ ಆದೇಶಿಸುತ್ತೇನೆ. ನಾಗ ಮೋಹನ್ ದಾಸ್ ಬೇಡಿಕೆಗೆ ಅನುಗುಣವಾಗಿ ಆರು ತಿಂಗಳ ಸಮಯವನ್ನು ಕೊಟ್ಟಿದ್ದೇವೆ. ನ್ಯಾಯಾಧೀಶರು ಬೇಗನೆ ವರದಿ ಕೊಟ್ಟರೆ ಸರ್ಕಾರ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಚಿಂತಿಸುತ್ತದೆ.ಆದಷ್ಟು ಬೇಗನೆ ವರದಿ ಕೊಡಲು ಕೂಡ ನಾಗ ಮೋಹನ್ ದಾಸ್ ಆಯೋಗಕ್ಕೆ ಸೂಚಿಸುತ್ತೇವೆ. ಸರ್ಕಾರ ಈ ವಿಷಯದಲ್ಲಿ ಯಾವುದೇ ವಿಳಂಬನೀತಿ ಅನುಸರಿಸುವುದಿಲ್ಲ ಮತ್ತು ನನ್ನ ಸರ್ಕಾರ ಯಾವಾಗಲೂ ವಾಲ್ಮಿಕಿ ಜನಾಂಗದ ಅಭಿವೃದ್ಧಿ ಪರ ನಿಲುವು ಹೊಂದಿದೆ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಜೊತೆ ಸಭೆ ಬಳಿಕ ಮಾತನಾಡಿದ ಸಮುದಾಯದ ಪ್ರಸನ್ನಾಂದ ಸ್ವಾಮೀಜಿ, ಇವತ್ತಿನ ಸಭೆಯಲ್ಲಿ ನಾವು ನಮ್ಮ‌ ಸಮುದಾಯದ ಸಚಿವರು ಶಾಸಕರು ಭಾಗವಹಿಸಿದ್ದೆವು. ನಾಲ್ಕು ದಶಕಗಳ ಬೇಡಿಕೆಗೆ ಇಂದು ಧನಾತ್ಮಕ ಪ್ರತಿಕ್ರಿಯೆ ನಮಗೆ ಸಿಕ್ಕಿದೆ.ಮೀಸಲಾತಿಗೆ ಸಂಬಂಧಿಸಿದಂತೆ ಪಾಸಿಟಿವ್ ಅಗಿ ಚರ್ಚೆಯಾಗಿದೆ.ಮುಖ್ಯಮಂತ್ರಿ ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ನ್ಯಾ.ನಾಗಮೋಹನ್ ದಾಸ್ ವರದಿಯನ್ನ ಅಧರಿಸಿ ಸಿಎಂ ಕ್ರಮ ಕೈಗೊಳ್ತಿನಿ ಎಂದಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಬಂದಾಗ ಈ ಬಗ್ಗೆ ಮಾತನಾಡುವೆ ಎಂದಿದ್ದಾರೆ.
ಹೀಗಾಗಿ ಮುಖ್ಯಮಂತ್ರಿ ಇದನ್ನ ಬಗೆ ಹರಿಸುತ್ತಾರೆ ಎಂದು ನಮಗೆ ವಿಶ್ವಾಸವಿದೆ ಎಂದರು. ನಮ್ಮ ಸಮುದಾಯ ದವರಿಗೆ ಡಿಸಿಎಂ ಸ್ಥಾನ ನೀಡಬೇಕು ಎನ್ನುವ ಬೇಡಿಕೆ ಇದೆ ಆದರೆ ಯಾರಿಗೆ ನೀಡಬೇಕು ಎಂದ ಹೇಳಲು ಸಾಧ್ಯವಿಲ್ಲ ಆದರೆ ಇಂದಿನ ಸಭೆಯಲ್ಲಿ ಡಿಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸಿಲ್ಲ ಎಂದರು.
ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಸಭೆಯ ವೇಳೆ ಪರಸ್ಪರ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಮುಖಾಮುಖಿಯಾದರು. ಪರಸ್ಪರ ಹಸ್ತಲಾಘವ ಮಾಡಿದ ಉಭಯ ನಾಯಕರು ಶುಭಾಶಯ ಕೋರಿದರು.ಡಿಸಿಎಂ ವಿಚಾರವಾಗಿ ಮುನಿಸಿಕೊಂಡಿದ್ದ ಇಬ್ಬರು ನಾಯಕರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿದ್ದು ಕುತೂಹಲ ಮೂಡಿಸಿತು.

ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ, ಸಮುದಾಯದ ಬಹುದಿನಗಳ ಬೇಡಿಕೆ ಇದು ನ್ಯಾ.ನಾಗಮೋಹನ ದಾಸ್ ಅವರು ವರದಿ‌ ಕೊಟ್ಟ ಬಳಿಕ ಕ್ರಮ ಕೈಗೊಳ್ಳೋದಾಗಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ ಎಂದರು‌. ಡಿಸಿಎಂ ಹುದ್ದೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಸ್ವಾಮೀಜಿಗಳಿಗ ಮಾತನಾಡವ ಹಕ್ಕಿದೆ ಆದರೆ ನಾನು ಕಾಂಗ್ರೆಸ್ ಶಾಸಕ ಹಾಗಾಗಿ ಅದರ ಬಗ್ಗೆ ಮಾತನಾಡಲ್ಲ ಎಂದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.