ರಸ್ತೆ ಅಪಘಾತ: ಐವರು ಸಾವು

Share on facebook
Share on twitter
Share on linkedin
Share on whatsapp
Share on email

ಡಿಯೋರಿಯಾ: ಜಿಲ್ಲೆಯ ಲಾರ್-ಸಲೆಂಪೂರ್ ರಸ್ತೆಯ ಮಾಧೋಪುರ್ ಗ್ರಾಮದ ಬಳಿ ಸೋಮವಾರ ತಡರಾತ್ರಿ ಎಸ್‍ಯುವಿ ಕಾರೊಂದು ಎದುರು ದಿಕ್ಕಿನಿಂದ ಬರುತ್ತಿದ್ದ ಎರಡು ಮೋಟಾರ್ ಸೈಕಲ್‌ಗಳಿಗೆ ಡಿಕ್ಕಿ ಹೊಡೆದು ಅವುಗಳಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಎರಡೂ ಮೋಟರ್ ಸೈಕಲ್‍ಗಳಲ್ಲಿ ತಲಾ ಮೂವರು ಸಾಗುತ್ತಿದ್ದರು. ಅಪಘಾತದಲ್ಲಿ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾನೆ.


ರಾತ್ರಿ ಸುಮಾರು 11 ಗಂಟೆಗೆ ಅಪಘಾತ ಸಂಭವಿಸಿದ್ದು, ಸ್ಥಳೀಯರಿಗೆ ಅಪಘಾತದ ಬಗ್ಗೆ ತಡವಾಗಿ ತಿಳಿದಿದ್ದರಿಂದ ಗಾಯಾಳುಗಳು ತ್ವರಿತವಾಗಿ ವೈದ್ಯಕೀಯ ನೆರವು ಪಡೆಯಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ಗಾಯಗೊಂಡ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಟಿ ಜೆ ಸಿಂಗ್ ಮಂಗಳವಾರ ಇಲ್ಲಿ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಮೂವರನ್ನು ರಾಜನ್ ಸಿಂಗ್ (40), ಪ್ರಮೋದ್ ಯಾದವ್ (45) ಮತ್ತು ಪ್ರಿನ್ಸ್ ತಿವಾರಿ (30) ಎಂದು ಗುರುತಿಸಲಾಗಿದೆ . ಇವರೆಲ್ಲರೂ ಗೋರಖ್‌ಪುರದ ಕಡೆಗೆ ಹೋಗುತ್ತಿದ್ದರು. ಉಳಿದಿಬ್ಬರ ಗುರುತು ಪತ್ತೆಯಾಗಿಲ್ಲ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter