ಪ್ರಿಯಾಂಕ ಗಾಂಧಿ ವಾಸದ ಬಂಗಲೆ, ಬಿಜೆಪಿ ಸಂಸದನಿಗೆ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರು ವಾಸವಾಗಿರುವ ಲೋಧಿ ಎಸ್ಟೇಟ್ ಸರ್ಕಾರಿ ನಿವಾಸವನ್ನು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಅನಿಲ್ ಬುಲಾನಿ ಅವರಿಗೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಹಂಚಿಕೆ ಮಾಡಿದೆ.


ಸರಕಾರಿ ಬಂಗಲೆಯನ್ನು ಇನ್ನೊಂದು ತಿಂಗಳೊಳಗೆ ತೆರವುಗೊಳಿಸುವಂತೆ ಕೇಂದ್ರ ಸರಕಾರ ಪ್ರಿಯಾಂಕ ಗಾಂಧಿಗೆ ಅವರಿಗೆ ಜುಲೈ ೧ರಂದು ನೋಟಿಸ್ ನೀಡಿತ್ತು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕಲ್ಪಿಸಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಹೀಗಾಗಿ ಲೋಧಿ ಎಸ್ಟೇಟ್ ನಲ್ಲಿ ಸರಕಾರದಿಂದ ನೀಡಲಾಗಿರುವ ಮನೆಯನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಕೇಂದ್ರ ಸರಕಾರ ಆದೇಶಿಸಿದೆ.


ಎಸ್ಪಿಜಿ ಭದ್ರತೆ ಮುಂದುವರಿಯದ ಕಾರಣ, ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಸರಕಾರದಿಂದ ನೀಡಲಾಗಿರುವ ಬಂಗಲೆಯನ್ನು ಆಗಸ್ಟ್ ೧ರೊಳಗೆ ಖಾಲಿ ಮಾಡಬೇಕು. ಇಲ್ಲದಿದ್ದರೆ, ಆಗಸ್ಟ್ ೧ರ ನಂತರ ಎಷ್ಟು ದಿನ ನಿವಾಸದಲ್ಲಿ ವಾಸವಾಗಿರುತ್ತಾರೋ ಅಷ್ಟು ದಿನ ಹಾನಿ ಶುಲ್ಕ ಹಾಗೂ ದಂಡದ ರೂಪದಲ್ಲಿ ಬಾಡಿಗೆ ಪಾವತಿ ಮಾಡಬೇಕು ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ತನ್ನ ಆದೇಶದಲ್ಲಿ ನೀಡಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter