ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ 23 ಕೋಟಿ ರೂ. ನಷ್ಟ

Share on facebook
Share on twitter
Share on linkedin
Share on whatsapp
Share on email

ಹುಬ್ಬಳ್ಳಿ: ಲಾಕ್ ಡೌನ್ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಾಕರಸಾಸಂ ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ ಅಂದಾಜು 23 ಕೋಟಿ ರೂಪಾಯಿ ಸಾರಿಗೆ ಆದಾಯ ನಷ್ಟ ಉಂಟಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್ ಘಟಕ ಇವೆ. ಈ ಘಟಕಗಳಲ್ಲಿ ಒಟ್ಟು 462 ಬಸ್ ಗಳಿದ್ದು ಹಾಗೂ 2173 ಸಿಬ್ಬಂದಿ ಕೆಲಸ ಮಾಡುತ್ತಾರೆ. ವಿಭಾಗದ ಬಸ್ ಪ್ರತಿದಿನ 1.90 ಲಕ್ಷ ಕಿಲೊ ಮೀಟರುಗಳಷ್ಟು ಕ್ರಮಿಸುತ್ತವೆ. ಇದರ ಲಾಭ ಸಾರ್ವಜನಿಕರು ಪಡೆಯುತ್ತಲ್ಲೇ ಇದ್ದಾರೆ. ಇದರಿಂದ 45 ರಿಂದ 50 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು.

ಮಾರ್ಚ್ ನಲ್ಲಿ ಹೋಳಿ ಹಾಗೂ ಕೊರೊನಾ ಕಾಣದಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯಿತು. ಪರಿಣಾಮ ಈ ತಿಂಗಳಿನಲ್ಲಿ 5.50 ಕೋಟಿ ರೂ. ನಷ್ಟವಾಗಿದೆ. ಏಪ್ರಿಲ್ ತಿಂಗಳಲ್ಲಿ ಯಾವುದೇ ಬಸ್ಸು ರಸ್ತೆಗಿಳಿಯದಿರುವುದರಿಂದಾಗಿ ರೂ.17.50 ಕೋಟಿ ಆದಾಯ ನಷ್ಟ ಉಂಟಾಗಿರುತ್ತದೆ ಎಂದಿದ್ದಾರೆ. .

ದೇಶವ್ಯಾಪಿ ಲಾಕ್ ಡೌನ್ ಘೋಷಿಸಿದ್ದರಿಂದ ಬಸ್ ರಸ್ತೆಗಿಳಿಯಲಿಲ್ಲ. ಅಲ್ಲದೆ ಬಹುದಿನಗಳಿಂದ ಬಸ್ಸುಗಳು ನಿಂತಲ್ಲೇ ನಿಂತಿರುವುದರಿಂದ, ಬ್ಯಾಟರಿ ಡೆಡ್ ಆಗುವುದನ್ನು ತಡೆಯುವುದಕ್ಕಾಗಿ ದಿನ ಬಿಟ್ಟು ದಿನ ಇಂಜಿನ್ ಚಾಲೂ ಮಾಡಿ ಪರಿಶೀಲನೆ ನಡೆಸಲಾಗಿದೆ. ಇನ್ನು ಸರ್ಕಾರದ ಆದೇಶ ಬಂದ ಮೇಲೆ ಎಲ್ಲಾ ಮುಂಜಾಗೃತಾ ಕ್ರಮಗಳೊಂದಿಗೆ ಬಸ್ ರಸ್ತೆಗಿಳಿಸಲು ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಮನಗೌಡರ್ ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter