ಬೆಳೆಗಾರರು, ಗ್ರಾಹಕರಲ್ಲೂ ಕಣ್ಣೀರು ತರಿಸುತ್ತಿರುವ ಈರುಳ್ಳಿ….!!

ಬೆಳೆಗಾರರು, ಗ್ರಾಹಕರಲ್ಲೂ ಕಣ್ಣೀರು ತರಿಸುತ್ತಿರುವ ಈರುಳ್ಳಿ….!!


ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಹೊರದೇಶಗಳಿಂದ 1 ಲಕ್ಷ 20 ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಈಗಾಗಲೇ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧ ಮಾಡಿದ್ದು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಈರುಳ್ಳಿ ದಾಸ್ತಾನು ಮಾಡಿಕೊಳ್ಳುವುದಕ್ಕೂ ಕೆಲವು ಕಟ್ಟುಪಾಡುಗಳು ಹಾಗೂ ಮಿತಿ ವಿಧಿಸಿದೆ.

ಆದರೂ ಈರುಳ್ಳಿ ಧಾರಣೆ ನಿಯಂತ್ರಣಕ್ಕೆ ಬಂದಿಲ್ಲ. ಮಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಈರುಳ್ಳಿ ಬೆಲೆ ಕೆ ಜಿ ಗೆ 100 ರ ಗಡಿ ದಾಟಿದೆ. ಮತ್ತೆ ಕೆಲವು ನಗರಗಳಲ್ಲಿ ದರ 150 ರೂ ಸಮೀಪಿಸುತ್ತಿದೆ.

ಈರುಳ್ಳಿ ಬೆಲೆ ವಿಚಾರ ಸಂಸತ್ತಿನಲ್ಲೂ ಪ್ರಸ್ತಾಪವಾಗಿದೆ. ಇದಕ್ಕೆ ಉತ್ತರಿಸಿದ ಹಣಕಾಸು ಸಚಿವರು, “ನಾನು ಈರುಳ್ಳಿಯನ್ನು ತಿನ್ನುವುದಿಲ್ಲ. ಈರುಳ್ಳಿ – ಬೆಳ್ಳುಳ್ಳಿ ಹೆಚ್ಚು ಉಪಯೋಗ ಮಾಡದೇ ಇರುವ ಕುಟುಂಬದಿಂದ ಬಂದಿದ್ದೇನೆ ಎಂದು ಹೇಳಿದ್ದಾರೆ. ,
ಸರ್ಕಾರ ಈರುಳ್ಳಿ ಬೆಲೆ ನಿಯಂತ್ರಿಸಲು ಹಲವು ಕ್ರಮ ತೆಗೆದುಕೊಂಡಿದೆ. ಇದು ನಿರೀಕ್ಷಿತ ಫಲ ಕೊಡಲು ಮತ್ತು ಹೊಸ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ ಸಮಯ ಬೇಕಾಗಿರುವುದರಿಂದ ಈರುಳ್ಳಿ ಬೆಲೆ ಹೆಚ್ಚಾಗಿದೆ. ಕ್ರಮೇಣ ತಗ್ಗಲಿದೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಿದ್ದ ಮಳೆ, ಪ್ರವಾಹದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಪ್ರಮಾಣದ ಈರುಳ್ಳಿ ಬೆಳೆ ಹಾಳಾಗಿದೆ. ಹೀಗಾಗಿ ಈರುಳ್ಳಿ ಬೆಳೆಯುವ ರೈತ, ಈರುಳ್ಳಿ ಕೊಳ್ಳುವ ಗ್ರಾಹಕರು ಇಬ್ಬರೂ ಕಣ್ಣೀರು ಹಾಕುತ್ತಿದ್ದಾರೆ. ಮಾಡಿದ ಸಾಲ ಹೇಗಪ್ಪಾ ತೀರಿಸುವುದು ಎಂದು ರೈತರು ಕಣ್ಣೀರು ಹಾಕುತ್ತಿದ್ದರೆ, ಈ ಪಾಟಿ ದರದಲ್ಲಿ ಈರುಳ್ಳಿ ಕೊಂಡುಕೊಳ್ಳುವುದು ಹೇಗೆ ಎಂಬ ಚಿಂತೆ ಗೃಹಿಣಿಯರನ್ನು ಮತ್ತು ಗ್ರಾಹಕರನ್ನೂ ಕಾಡುತ್ತಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.