ಸುಳ್ಳು ಹೇಳುವ ಚಟ ಇದ್ದರೆ ನಾನು ಎಂದೋ ಮುಖ್ಯಮಂತ್ರಿ ಆಗಿರುತ್ತಿದ್ದೆ

Share on facebook
Share on twitter
Share on linkedin
Share on whatsapp
Share on email

ವಿಜಯಪುರ: ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನನಗೆ ಯಾವುದೇ ನೊಟೀಸ್ ಬಂದಿಲ್ಲ. ಒಂದು ವೇಳೆ ನೋಟೀಸ್ ಬಂದರೆ ಅದಕ್ಕೇನು ಉತ್ತರ ಕೊಡಬೇಕು ಎಂಬುದನ್ನು ಚರ್ಚಿಸಿ ಉತ್ತರ ಕೊಡುತ್ತೇನೆ. ನನ್ನ ಬಗ್ಗೆ ಹೈಕಮಾಂಡ್‍ಗೆ ತಪ್ಪು ಕಲ್ಪನೆಯಿಂದ ಹೇಳಿರುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಕಲ್ಪನೆಯಿಂದ ನನಗೆ ಬಿಜೆಪಿ ಸಂಸದೀಯ ಸಮಿತಿಯಿಂದ ನೊಟೀಸ್ ನೀಡಿರಬೇಕು. ಹಾಗಾಗಿ ನೊಟೀಸ್ ಬಂದಿರಬೇಕು.

ನೆರೆ ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ, ಮಾಧ್ಯಮಗಳು ನಿರಂತರ ವರದಿ ಬಿತ್ತರಿಸಿವೆ. ಸಂತ್ರಸ್ಥರ ಸ್ಥಿತಿ ಕಂಡು ನಾನು ಸೇರಿದಂತೆ ಎಲ್ಲರೂ ಕಣ್ಣೀರು ಹಾಕಿದ್ದಾರೆ.

ಇಷ್ಟೆಲ್ಲ ಸಮಸ್ಯೆ ಇದ್ದರೂ ಸ್ಪಂದಿಸದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದ್ರೋಹ ಮಾಡಿದಂತಾಗುತ್ತದೆ. ಸಂತ್ರಸ್ಥರಿಗೆ ಪರಿಹಾರ ಕೊಡಿಸದಿದ್ದರೆ ಸಂಸದ, ಶಾಸಕ, ಸಚಿವರಾಗಿದ್ದರೆ ಏನು ಪ್ರಯೋಜನ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter