ಸ್ವಚ್ಚ ಭಾರತ ನಿರ್ಮಾಣ ಮಾಡಲು ಸಾರ್ವಜನಿಕರಿಗೆ ಕರೆ : ಕಿರಿಲಿಂಗಪ್ಪ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ

ಕವಿತಾಳ : ಸ್ವಚ್ಚ ಭಾರತ ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಮತ್ತು ಪ್ಲಾಸ್ಟಿಕ್ ಮತ್ತು ಬಯಲು ಶೌಚಾಲಯ ಮುಕ್ತ ಮಾಡಲು ಸಾರ್ವಜನಿಕರಿಗೆ ಮಲ್ಲಟ ಗ್ರಾಮದ ಜಿಲ್ಲಾ ಪಂಚಾಯಿತಿ ಸದಸ್ಯ ಕಿರಿಲಿಂಗಪ್ಪ ಕರೆ ನೀಡಿದರು.

ಶನಿವಾರದಂದು ನಡೆದ ಪಟ್ಟಣದ ..ಹಿ.ಪ್ರಾ ಶಾಲೆ ಆವರಣದಲ್ಲಿ ಹಮ್ಮಿಕೊಂಡ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ವಿಜಯಪುರ (ವಾರ್ತಾ ಮತ್ತು ಪ್ರಸಾರ ಇಲಾಖೆ), ಪಟ್ಟಣ ಪಂಚಾಯಿತಿ ಕವಿತಾಳ, ಸಮುದಾಯ ಆರೋಗ್ಯ ಕೇಂದ್ರ ಕವಿತಾಳ, ಶಿಶು ಅಭಿವೃದ್ಧಿ ಯೋಜನೆ ಸಿರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ರಾಯಚೂರು ಹಾಗೂ ಶ್ರಮ ಜೀವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ(ರಿ), ಮಲ್ಲದಗುಡ್ಡ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ವಚ್ಚ ಭಾರತ ಯೋಜನೆಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.  ಅಲ್ಲದೇ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತಿದೆ.

ಜನರು ಇದರ ಉಪಯೋಗಗಳನ್ನು ಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರವು ಸ್ವಚ್ಚ ಭಾರತ ನಿರ್ಮಾಣಕ್ಕಾಗಿ ಸಾಕಷ್ಟು ಸಾಕ್ಷಚಿತ್ರ ಮತ್ತು ಹಣದ ನೆರವು ಸಾರ್ವಜನಿಕರಿಗೆ ನೀಡಿದೆ ಎಂದರು.

ತಾಲೂಕು ಸಂಯೋಜಕ ಭೀಮೇಶ ಸ್ವಚ್ಚತೆಯ ಕುರಿತು ಜನರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರೆ, ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಮಿತ್ರ ಮಾತನಾಡಿ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯ ಕುರಿತು ಮಾಹಿತಿ ನೀಡಿದರು.

ಅಂಗನವಾಡಿ ಮೇಲ್ವೇಚಾರಕಿ ಲಕ್ಷ್ಮೀ, ದೈಹಿಕ ಶಿಕ್ಷಕ ಹನುಮಂತಪ್ಪ, ಶ್ರಮ ಜೀವಿ ಸಂಸ್ಥೆ ಮಲ್ಲಯ್ಯ ಗೋರ್ಕಲ್, . ಸದಸ್ಯ ಬಸವರಾಜ ಎಚ್, ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದ ಮೊದಲು ಡೊಳ್ಳು ಕುಣಿತ ಮತ್ತು ಪ್ರೌಢಶಾಲಾ ಮಕ್ಕಳೊಂದಿಗೆ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು.

ಸಂದರ್ಭದಲ್ಲಿ ಮುಖ್ಯಾಧಿಕಾರಿ ಈರಣ್ಣ ಜಗ್ಲಿ, .ಪಂ ಸದಸ್ಯರಾದ ಅಕ್ಭರ್ ಎಡಿಎಮ್, ಗಂಗಪ್ಪ ದಿನ್ನಿ, ಮೌನೇಶ ಪೂಜಾರಿ, ಖಾಜಾ ಪಾಷ, ಮೌನೇಶ ನಾಯಕ, ಜಿ.ಎಸ್.ಸುಂಕದ, ಉಪನ್ಯಾಸಕ ವಿರೇಶ,ಪ್ರೌಡ, ಎಚ್.ಮಲ್ಲಪ್ಪ ಸೇರಿದಂತೆ ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.    

ಶೇ% 90 ರಷ್ಟು ರೋಗ ರುಜೀನಗಳು ಬಯಲು ಶೌಚಾಲಯದಿಂದ ಹರಡುತ್ತಿದ್ದು ಇದನ್ನು ತಡೆಯಬೇಕೆಂದು ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಸ್ವಚ್ಚ ಭಾರತ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶ ಹೊಂದಿದೆ. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ್ ಮತ್ತು ಅಂಗನವಾಡಿಗಳ ಸಂಯೋಗದೊಂದಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಇನ್ನು ಹೆಚ್ಚು ಹೆಚ್ಚು ಮಾಡಬೇಕುಮುರಳೀಧರ್, ಸಂಯೋಜಕರು, ಸ್ವಚ್ಚ ಭಾರತ ಕಾರ್ಯಕ್ರಮ

ಸ್ವಚ್ಚ ಭಾರತ ಸ್ವಸ್ಥ ಭಾರತ ನಿರ್ಮಾಣಕ್ಕಾಗಿ ಕೈ ಜೋಡಿಸಿ

ಜನರು ಸ್ವಚ್ಚ ಭಾರತ ಯೋಜನೆಯ ಉಪಯೋಗ ಮತ್ತು ಪ್ರಯೋಜನವನ್ನು ಪಡೆದುಕೊಂಡು ವೈಯಕ್ತಿಕ ಶೌಚಾಲಯ ನಿರ್ಮಾಣ ಮೂಲಕ ಸ್ವಚ್ಚ ಭಾರತ ಸ್ವಸ್ಥ ಭಾರತ ನಿರ್ಮಾಣಕ್ಕಾಗಿ ಕೈ ಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ಕಿರಿಲಿಂಗಪ್ಪ ಕರೆ ನೀಡಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter