ಬೊಕ್ಕಸ ಖಾಲಿಯಾಗಿಲ್ಲ ಲೂಟಿಯಾಗಿದೆ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ರಾಜ್ಯದ ಬೊಕ್ಕಸ ಖಾಲಿಯಾಗಿಲ್ಲ ಆದರೆ ಲೂಟಿಯಾಗಿದೆ ಅದನ್ನು ಭರ್ತಿ ಮಾಡುವ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡುತ್ತಿದ್ದಾರೆ ನಮ್ಮನ್ನು ಟೀಕಿಸುವ ಮೊದಲ ಕೊಡಗಿನಲ್ಲಿ ಮನೆ ಕಟ್ಟಿಸಿಕೊಟ್ಟಿದ್ದೀರಾ ? ಎನ್ನುವುದನ್ನು ಒಮ್ಮೆ ನೋಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೊಡಗಿನಲ್ಲಿ ಸುರಿದ ಅತಿವೃಷ್ಠಿ ಸಂತ್ರಸ್ತರಿಗೆ ಮನೆ ಕಟ್ಟಿಸಿ ಕೊಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು.

ಪ್ರತಿ ಮನೆ ನಿರ್ಮಾಣಕ್ಕೆ 97 ಸಾವಿರ ನೀಡುವುದಾಗಿ ಘೋಷಿಸಿದ್ದರು ಆದರೆ ಇನ್ನೂ ಕೊಡಗಿನಲ್ಲಿ ಯಾರಿಗೂ ಮನೆ ಕಟ್ಟಿಸಿಕೊಟ್ಟಿಲ್ಲ ಆದರೆ ಯಡಿಯೂರಪ್ಪ ಈಗಾಗಲೇ ಮನೆ ಕಟ್ಟಲು 1 ಲಕ್ಷ ರೂ.ಆರ್.ಟಿ ಜಿ.ಎಸ್. ಮೂಲಕ ಹಣ ಪಾವತಿಸುತ್ತಿದ್ದಾರೆ.

ಹೀಗಾಗಿ ಕುಮಾರಸ್ವಾಮಿ ಅವರೇ ನೆರೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ, ನೆರೆ ಪರಿಹಾರ ಕಾರ್ಯ ಸಂಬಂಧ ಸರ್ಕಾರದ ಜೊತೆ ಸಹಕರಿಸಿ ಎಂದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter