ಅಥ್ಲೆಟಿಕ್ಸ್: ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ

ಹಟ್ಟಿ: 2019-20ನೇ ಸಾಲಿನ ಕ್ರೀಡಾ ಕೂಟದಲ್ಲಿ ಶ್ರೀ ಶರಣಬಸವೇಶ್ವರ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾದ ಭಿಮಾಂಬಿಕಾ/ ಹನುಮಂತ ಪಲಕನ ಮರಡಿ ಟ್ರಿಪಲ್ ಜಂಪ್‍ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಕರ್ನಾಟಕ ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ, ರಾಯಚೂರು ತಾರಾನಾಥ ಶಿಕ್ಷಣ ಸಂಸ್ಥೆಯ ಹಮ್ದರ್ದ್ ಪದವಿಪೂರ್ವ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಡೆಸಿದ ಎಲ್.ವಿ.ಡಿ. ಮೈದಾನದಲ್ಲಿ  ರಾಯಚೂರು ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು.

ಸಾಧನೆಯನ್ನು ಮಾಡಿದ ವಿದ್ಯಾರ್ಥಿನಿಗೆ ಹಾಗೂ ಅಥ್ಲೇಟಿಕ್ಸ್ ಕೋಚ್ ದೈಹಿಕ ಶಿಕ್ಷರಾದ ರಾಯಪ್ಪ ಬಳಗಾನೂರುರವರಿಗೆ ಶ್ರೀ ಶರಣ ಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅಮರೇಗೌಡ ಪಾಟೀಲ್À ಬಯ್ಯಾಪುರ ಹಾಗೂ ಆಡಳಿತ ಮಂಡಳಿಯ ಆಡಳಿತಾಧಿಕಾರಿಗಳಾದ ದೊಡ್ಡಬಸನಗೌಡ . ಪಾಟೀಲ್ ಬಯ್ಯಾಪುರ ಹಾಗೂ ಪ್ರಾಚಾರ್ಯರಾದ ಗುರುರಾಜ.ಜಿ.ಕೆ ಸತ್ಯಂಪೇಟ್, ಕಾರ್ಯ ನಿರ್ವಾಣಾಧಿಕಾರಿಯಾದ ಪ್ರಶಾಂತ್ ಪಾಟೀಲ್ ಮತ್ತು ಸಂಸ್ಥೆಯ ಉಪನ್ಯಾಸಕರಾದ ರಾಜ ಮಹ್ಮದ್, ಲೋಹತ್ ಕುಮಾರ್, ಸುಭಾಷ, ಅಮರೇಶ ಗೆಜ್ಜಲಗಟ್ಟ, ಅಮರೇಶ ರೋಡಲಬಂಡ, ರಾಧಾ, ಬಾಲಮ್ಮ ರವರುಗಳು ಅಭಿನಂದಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter