ವಿಶ್ವದಲ್ಲಿ ಒಂದೇ ದಿನ 2,12,326 ಹೊಸ ಕೋವಿಡ್-19 ಪ್ರಕರಣ

Share on facebook
Share on twitter
Share on linkedin
Share on whatsapp
Share on email

ನವದೆಹಲಿ:ವಿಶ್ವದಲ್ಲಿ ಕೊರೊನಾ ವೈರಸ್ ಮಹಾಮಾರಿಯ ಅಬ್ಬರ ಜೋರಾಗಿದೆ. ಶನಿವಾರ ವಿಶ್ವದಲ್ಲಿ ಈ ಸೋಂಕಿಗೆ ಒಳಗಾದವರ ಸಂಖ್ಯೆ ಗರಿಷ್ಠ ಪ್ರಮಾಣಕ್ಕೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿದ ಮಾಹಿತಿಯ ಅನುಸಾರ ಕಳೆದ 24 ಗಂಟೆಗಳಲ್ಲಿ 2,12,326 ಹೊಸ ಕೋವಿಡ್-19 ಪ್ರಕರಣಗಳನ್ನು ವರದಿ ಆಗಿವೆ ಎಂದು ತಿಳಿಸಿದೆ.

ಕೊರೊನಾ ಅಮೆರಿಕ ಪ್ರಾಂತ್ಯದಲ್ಲಿ ಅಟ್ಟಹಾಸ ಮೆರೆದಿದೆ. ಈ ಪ್ರಾಂತ್ಯದಲ್ಲಿ ಕಳೆದ ಒಂದು ದಿನದಲ್ಲಿ 1,29,772 ಹೊಸ ಪ್ರಕರಣ ವರದಿಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ. ಇದರಲ್ಲಿ ಸುಮಾರು ಅರ್ಧದಷ್ಟು ಹೊಸ ಪ್ರಕರಣಗಳು ಕ್ರಮವಾಗಿ ಅಮೆರಿಕ (53,213) ಮತ್ತು ಬ್ರೆಜಿಲ್‌ನಲ್ಲಿ (48,105) ಹೊಸ ಸೋಂಕುಗಳು ದಾಖಲಾಗಿವೆ.

ಆಗ್ನೇಯ ಏಷ್ಯಾ ಪ್ರದೇಶದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 27,947 ಹೊಸ ಪ್ರಕರಣಗಳು ಮತ್ತು 534 ಸಾವುಗಳು ದಾಖಲಾಗಿವೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter