ಭಾರತವನ್ನು ಅಮೆರಿಕಾ ಸದಾ ಪ್ರೀತಿಸುತ್ತದೆ

Share on facebook
Share on twitter
Share on linkedin
Share on whatsapp
Share on email

ವಾಷಿಂಗ್ಟನ್ಅ: ಮೆರಿಕಾದ ೨೪೪ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತವನ್ನು ಅಮೆರಿಕಾ ಸದಾ ಪ್ರೀತಿಸುತ್ತದೆ ಎಂದು ಹೇಳುವ ಮೂಲಕ ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಸ್ಮರಿಸಿದ್ದಾರೆ.


ಅಮೆರಿಕಾ ಸ್ವಾಂತಂತ್ರ್ಯ ದಿನೋತ್ಸವ ಅಂಗವಾಗಿ ಶನಿವಾರ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್ ಹಾಗೂ ಆ ದೇಶದ ನಾಗರೀಕರಿಗೆ ಶುಭಾಶಯ ಹೇಳಿದ್ದರು.
ಅಧ್ಯಕ್ಷ ಟ್ರಂಪ್ ಹಾಗೂ ಅಮೆರಿಕಾ ನಾಗರೀಕರಿಗೆ ೨೪೪ ನೇ ಸ್ವಾತಂತ್ರ್ಯ ದಿನೋತ್ಸವ ಶುಭಾಶಗಳು. ಈ ದಿನ ನೀವು ಪ್ರತಿಪಾದಿಸುವ ಮುಕ್ತತೆ, ಸ್ವಾತಂತ್ರ್ಯ ವನ್ನು ಜಗತ್ತಿನ ಅತಿದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆಯಾಗಿ ನಾವು ಸದಾ ಆದರಿಸುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದರು.

ಈ ಕುರಿತು ಸ್ಪಂದಿಸಿರುವ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿ.. ಭಾರತದ ಮೇಲಿರುವ ತಮ್ಮ ಅಭಿಮಾನವನ್ನು ಅನಾವರಣಗೊಳಿಸಿದ್ದಾರೆ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter