ಬೆಂಗಳೂರಿನ ಮಹಿಳೆಯರಿಗೆ ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ಘಟಕದಿಂದ ಪ್ರಶಸ್ತಿ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ವಿಶ್ವ ಸಂಸ್ಥೆಯ ಮಹಿಳಾ ಸಬಲೀಕರಣ ಘಟಕ ಮೈಗೌ ಸಹಯೋಗದೊಂದಿಗೆ ಆಯೋಜಿಸಿದ್ದ ಕೋವಿಡ್-೧೯ ಸ್ತ್ರೀ ಶಕ್ತಿ ಸ್ಪರ್ಧೆಯಲ್ಲಿ ರಾಜ್ಯದ ಮೂವರು ಮಹಿಳೆಯರ ನೇತೃತ್ವದ ನವೋದ್ಯಮಗಳಿಗೆ ಪ್ರಶಸ್ತಿ ಲಭಿಸಿದೆ.
ಒಟ್ಟಾರೆ ದೇಶದ ಮಹಿಳೆಯರ ನೇತೃತ್ವದ ಆರು ನವೋದ್ಯಮಗಳಿಗೆ ಪ್ರಶಸ್ತಿ ಸಂದಿದ್ದು, ವಿನೂತನ ಪರಿಹಾರ ನೀಡಿದ ಗಳೂರಿನ ಸೆರಾಗೇನ್ ಬಯೋ ಥೆರಪೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ಸಹ ಸಂಸ್ಥಾಪಕರಾದ ವಾಸಂತಿ ಪಳನಿವೇಲ್ ಅವರು ಕೋವಿಡ್-೧೯ನಿಂದಾಗಿ ಉಂಟಾಗುವ ಉಸಿರಾಟ ತೊಂದರೆಗಳ ಚಿಕಿತ್ಸೆಗೆ ಪ್ಲಾಸ್ಮಾ ಪರಿಹಾರವನ್ನು ಅಭಿವೃದ್ಧಿಪಡಿಸಿದ್ದಾರೆ.

ಬೆಂಗಳೂರಿನ ರೆಸೆಡಾ ಲೈಫ್ ಸೈನ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕಿ ಡಾ. ಪಿ. ಗಾಯತ್ರಿ ಹೆಲಾ ಅವರು, ಸಿಂಥೆಟಿಕ್ ರಾಸಾಯನಿಕಗಳ ಬದಲಾಗಿ ಗಿಡಗಳ ಸಾರವನ್ನು ಬಳಸಿ, ಕೃಷಿ ಆಧಾರಿತ ಗೃಹ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸುವ ಪರಿಕಲ್ಪನೆಯನ್ನು ನೀಡಿದ್ದರು. ಕೋವಿಡ್-೧೯ ಸೋಂಕಿನ ಜೊತೆಗೆ ಇತರೆ ಸೋಂಕುಗಳಿಗೂ ಬಳಸಬಹುದಾದ ಮದ್ಯ ಸಾರವಿಲ್ಲದ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸುವ ವಿನೂತನ ಚಿಂತನೆಯನ್ನು ಅವರು ಮಂಡಿಸಿದ್ದರು.
ಇವರಲ್ಲದೇ ಬೆಂಗಳೂರು ಮೂಲದ ಎಂಪಥಿ ಡಿಸೈನ್ ಲ್ಯಾಬ್‌ನ ಸಹ ಸಂಸ್ಥಾಪಕರಾದ ಶಿವಿ ಕಪಿಲ್ ಅವರು ಗರ್ಭಿಣಿಯರಿಗೆ ಆರೋಗ್ಯದ ಸೂಕ್ತ ಸಲಹೆ, ಸೂಚನೆಗಳನ್ನು ನೀಡುವ ಐಒಟಿ ಆಧಾರಿತ ಸಾಧನವನ್ನು ಅನ್ವೇಷಣೆ ಮಾಡಿದ್ದರು. ಇದು ಮಗುವಿನ ನಿರೀಕ್ಷೆಯಲ್ಲಿರುವವರಿಗೆ ಸಕಾಲದಲ್ಲಿ ಸೂಕ್ತ ಸಲಹೆ , ಮುನ್ನೆಚ್ಚರಿಕೆಗಳನ್ನು ನೀಡಲಿದೆ. ಈ ಮೂವರು ಮಹಿಳಾ ಸಾಧಕಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಮೈಗೌ ಆಯೋಜಿಸಿದ್ದ ಆವಿಷ್ಕಾರಿ ವೇದಿಕೆಯಲ್ಲಿ ಮಹಿಳೆಯರ ನೇತೃತ್ವದ ನವೋದ್ಯಮಗಳು ಹಾಗೂ ಅವುಗಳು ಕಂಡು ಹಿಡಿದಿರುವ ಪರಿಹಾರಗಳು ಮತ್ತು ಬಹು ದೊಡ್ಡ ಪ್ರಮಾಣದ ಮಹಿಳೆಯರ ಮೇಲೆ ಪರಿಣಾಮ ಬೀರುವಂತಹ ನವೀನಪರಿಹಾರಗಳನ್ನು ಕಂಡುಹಿಡಿದಿರುವ ಉದ್ಯಮಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿತ್ತು. ಒಟ್ಟು ೧ ಸಾವಿರದ ೨೬೫ ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter