ಲೈಫ್ ಈಸ್ ಬ್ಯೂಟಿಫುಲ್ ಚಿತ್ರಕ್ಕೆ ಪೃಥ್ವಿ ನಾಯಕ

Share on facebook
Share on twitter
Share on linkedin
Share on whatsapp
Share on email

ಈ ವರ್ಷದ ಆರಂಭದಲ್ಲಿ ದಿಯಾ’ಚಿತ್ರದ ಮೂಲಕ ಭರ್ಜರಿ ಎಂಟ್ರಿ ಪಡೆದುಕೊಂಡಿರುವ ನಟ ಪೃಥ್ವಿ ಅಂಬಾರ್ ಸದ್ಯ ಒಂದರ ಹಿಂದೊಂದು ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಪೃಥ್ವಿ ಅಂಬಾರ್ ಅಭಿನಯಿಸುತ್ತಿರುವ ಶುಗರ್‍ಲೆಸ್ ಎನ್ನುವ ಹೊಸ ಚಿತ್ರ ಘೋಷಣೆಯಾಗಿತ್ತು. ಅದರ ಬೆನ್ನಲ್ಲೇ ಪೃಥ್ವಿ ನಾಯಕನಾಗಿ ಅಭಿನಯಿಸುತ್ತಿರುವ ಮತ್ತೂಂದು ಹೊಸಚಿತ್ರ ಘೋಷಣೆಯಾಗಿದೆ. ಅದರ ಹೆಸರು ಲೈಫ್ ಈಸ್ ಬ್ಯೂಟಿಫುಲ್.

ಅಂದಹಾಗೆ, ಈ ಹೊಸಚಿತ್ರದ ಟೈಟಲ್ ಪೆÇೀಸ್ಟರ್ ಇದೀಗ ಬಿಡುಗಡೆಯಾಗಿದ್ದು, ನಟ ಡಾಲಿ ಧನಂಜಯ್, ಲೈಫ್ ಈಸ್ ಬ್ಯೂಟಿಫುಲ್ ಟೈಟಲ್ ಪೆÇೀಸ್ಟರ್ ಅನಾವರಣ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಬಿಡುಗಡೆಯಾಗಿರುವ ಲೈಫ್ ಈಸ್ ಬ್ಯೂಟಿಫುಲ್ ಪೆÇೀಸ್ಟರ್‍ನಲ್ಲಿ ಸುಂದರ ಪ್ರಕೃತಿಯ ಹಿನ್ನೆಲೆಯಲ್ಲಿ ಖಾಲಿ ದಾರಿಯಲ್ಲಿ ನಾಯಕ ಸ್ಕೂಟರ್ ಸವಾರಿ ಹೊರಟಿರುವಂತಿದ್ದು, ಪೆÇೀಸ್ಟರ್ ಒಂದಷ್ಟು ಗಮನ ಸೆಳೆಯುತ್ತಿದೆ. ಸುಮಾರು ಎರಡು ದಶಕಗಳ ಕಾಲ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಹಲವು ಜಾಹೀರಾತುಗಳನ್ನು ನಿರ್ದೇಶಿಸಿದ ಅನುಭವವಿರುವ ಅರುಣ್ ಕುಮಾರ್. ಎಂ ಮತ್ತು ಸಬು ಅಲೋಶಿಯಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ

ಈ ಹಿಂದೆ ಮಮ್ಮಿ, ದೇವಕಿ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್.ಹೆಚ್ ಮತ್ತು ಉದ್ಯಮಿ ಕಿಶೋರ್ ನರಸಿಂಹಯ್ಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿಲ್ವರ್ ಟ್ರೈನ್ ಇಂಟರ್‍ನ್ಯಾಷನಲ್’ಮತ್ತು ಫ್ರೈಡೇ ಫಿಲ್ಮ್ ಬ್ಯಾನರ್ ಸಹಯೋಗದೊಂದಿಗೆ ಚಿತ್ರ ತಯಾರಾಗುತ್ತಿದೆ. ಸದ್ಯ ಲೈಫ್ ಈಸ್ ಬ್ಯೂಟಿಫುಲ್ ಚಿತ್ರದ ನಾಯಕನ ಆಯ್ಕೆಯಾಗಿದ್ದು, ಚಿತ್ರದ ಪ್ರೀ-ಪೆÇ್ರಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದೆ. ಬಾಕಿ ಉಳಿದಂತೆ ಚಿತ್ರದ ಕಥಾಹಂದರ, ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.­

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter