ಬೆಂಗಳೂರಿನಲ್ಲಿ ಬರದಿಂದ ಸಾಗಿದ ಕೆಜಿಎಫ್-2 ಚಿತ್ರದ ಶೂಟಿಂಗ್

Share on facebook
Share on twitter
Share on linkedin
Share on whatsapp
Share on email

ಪ್ರಶಾಂತ್ ನೀಲ್ ನಿರ್ದೆಶನದ ಕೆಜಿಎಫ್-2 ಚಿತ್ರಿಕರಣ ಇತ್ತೀಚಡಗಷ್ಟೇ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿ ನಿರ್ಮಿಸಲಾದ ಬೃಹತ್ ಸೆಟ್‍ನಲ್ಲಿ ಶುರುವಾಗಿದೆ. ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಕೆಲಸಗಳಿಗೆ ಇದೀಗ ಚಾಲನೆ ಸಿಕ್ಕಿದ್ದು, ಸಿನಿಮಾ ತಂಡಗಳು ಮತ್ತೆ ಕ್ಯಾಮರಾ ಆನ್ ಮಾಡಿವೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಆಕ್ಟೋಬರ್ 23ರಂದು ಕೆಜಿಎಫ್-2 ಬಿಡುಗಡೆಯಾಗಲಿದೆ ಎಂದು ದಿನಾಂಕ ಘೋಷಿಸಿದ್ದು 90% ಚಿತ್ರಿಕರಣ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಶೂಟಿಂಗ್‍ಗಾಗಿ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿಯೇ ಬೃಹತ್ ಸೆಟ್ ಹಾಕಲಾಗಿದ್ದು, ಇಡೀ ತಂಡ ಶೂಟಿಂಗ್‍ನಲ್ಲಿ ಪಾಲ್ಗೊಳ್ಳುತ್ತಿದೆ. ಒಟ್ಟು 20 ದಿನಗಳ ಕಾಲ ಚಿತ್ರಿಕರಣ ನಡೆಯಲಿದೆ ಎಂದು ತಿಳಿದುಬಂದಿದೆ.

ಅಧೀರ ಪಾತ್ರಧಾರಿ ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದರಿಂದ, ಅವರು ಗುಣಮುಖರಾಗಿ ಬಂದ ನಂತರವಷ್ಟೇ ಕೊನೆಯ ಹಂತದ ಚಿತ್ರಿಕರಣ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕೆಜಿಎಫ್-2 ನಲ್ಲಿ ಅನಂತ್‍ನಾಗ್ ಪಾತ್ರವನ್ನು ಪ್ರಕಾಶ್ ರಾಜ್ ನಿರ್ವಯಿಸುತ್ತಿದ್ದಾರೆ ಎಂದು ಮಾತನಾಡಲಾಗುತ್ತಿದೆ. ಆದರೆ, ಅನಂತ್‍ನಾಗ್ ಬದಲಿಗೆ ಪ್ರಕಾಶ್ ರೈ ಬಂದಿಲ್ಲ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಪ್ರಕಾಶ್ ರೈ ಮೊನ್ನೆಯಷ್ಟೇ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರದ ಸಂಗೀತದ ಕೆಲಸವೂ ಬಹುತೇಕ ಪೂರ್ಣಗೊಳ್ಳುತ್ತಿದೆ. ಯಶ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಬಣ್ಣ ಹಚ್ಚಿದ್ದು, ಶ್ರೀನಿಧಿ ಶೆಟ್ಟಿ ಯಶ್‍ಗೆ ನಾಯಕಿಯಗಿ ನಟಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter