ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರಕ್ಕೆ ರಚಿತಾ ರಾಮ್ ನಾಯಕಿ

Share on facebook
Share on twitter
Share on linkedin
Share on whatsapp
Share on email

ಸುಪ್ರಭಾತ, ಅಮೃತ ವರ್ಷಿಣಿ, ಲಾಲಿ, ನಿಶ್ಯಬ್ಧ, ಅಭಿ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ದಿನೇಶ್ ಬಾಬು ಅವರ 50ನೇ ಚಿತ್ರ ಕಸ್ತೂರಿ, ಇದಕ್ಕೆ ರಚಿತಾ ರಾಮ್ ನಾಯಕಿ. ಮೊದಲು ಡಾ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಲನಚಿತ್ರ ಕಸ್ತೂರಿ ನಿವಾಸದ ಶೀರ್ಷಿಕೆಯನ್ನೇ ಈ ಚಿತ್ರಕ್ಕೂ ಇಡಲಾಗಿತ್ತು. ನಂತರ ಒಂದಿಷ್ಟು ಪರ-ವಿರೋದದ ಮಾತುಗಳು ಬಂದಿದ್ದರಿಂದ ನಿರ್ದೇಶಕರು ಹೆಸರು ಬದಲಿಸಿ ಕೇವಲ ಕಸ್ತೂರಿ ಎಂದಷ್ಟೇ ಇಡಲು ನಿರ್ದರಿಸಿದ್ದಾರೆ.

ದಿನೇಶ್ ಬಾಬು ಅವರೇ ಇದಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ತಮ್ಮ ಜೀವನದಲ್ಲಿ ಆದ ಘಟನೆಯನ್ನೇ ತೋರಿಸುತ್ತಿದ್ದಾರಂತೆ. ಥ್ರಿಲ್ಲರ್ ಚಿತ್ರವಾದ ಇದರಲ್ಲಿ ಕೆಲವು ಹಾರರ್ ಅಂಶಗಳೂ ಇರುತ್ತವಂತೆ. 44 ಕನ್ನಡ ಚಿತ್ರಗಳು, 2 ತೆಲುಗು, 2 ಮಲಯಾಳಂ ಮತ್ತು ಒಂದು ತಮಿಳು ಚಿತ್ರವನ್ನು ನಿರ್ದೇಶನ ಮಾಡಿದ್ದರೂ ಕೂಡ ಈ ಚಿತ್ರವನ್ನು ಮೊದಲ ಚಿತ್ರದಂತೆಯೇ ಪರಿಗಣಿಸುತ್ತಾರಂತೆ ನಿರ್ದೇಶಕರು, ಅಷ್ಟು ಬದ್ಧತೆಯಿಂದ ಕೆಲಸ ಮಾಡಬೇಕೆನ್ನುತ್ತಾರೆ.

ಸೆಪ್ಟೆಂಬರ್ 25ರ ಹೊತ್ತಿಗೆ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಯೋಚನೆ ಮಾಡುತ್ತಿದ್ದು ಇನ್ನೂ ಸ್ಥಳ ನಿಗದಿಪಡಿಸಿಲ್ಲ. ಪಿಕೆಎಚ್ ದಾಸ್ ಅವರ ಛಾಯಾಗ್ರಹಣ, ಗುಮಿನೇನಿ ವಿಜಯ್ ಸಂಗೀತವಿರುತ್ತದೆ.ಚಿತ್ರದಲ್ಲಿ ಕೇವಲ ಒಂದೇ ಒಂದು ಹಾಡು ಇರುವುದಂತೆ. ರವೀಶ್ ಆರ್ ಸಿ ಮತ್ತು ರುಬೆನ್ ರಾಜ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter