ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆ ಹಚ್ಚಿದ ನಾಸಾ

Share on facebook
Share on twitter
Share on linkedin
Share on whatsapp
Share on email

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಚಂದ್ರಯಾನ್-2 ರ ವಿಕ್ರಮ್ ಲ್ಯಾಂಡರ್ ಅವಶೇಷಗಳನ್ನು ಚಂದ್ರನ ಮೇಲ್ಮೈಯಲ್ಲಿ ಪತ್ತೆ ಹಚ್ಚಿದೆ.


ಕಳದೆ ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ನಿಧಾನವಾಗಿ ಇಳಿಯುವ ಮೊದಲು ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ಆರು ತಿಂಗಳ ಕಾಲ ಅಡೆ- ತಡೆಯಿಲ್ಲದೆ ನಿರಂತರ ಪ್ರಯಾಣ ಮಾಡಿದ್ದ ಲ್ಯಾಂಡರ್ ಕೊನೆ ಘಳಿಗೆಯಲ್ಲಿ ಕೈಕೊಟ್ಟಿತ್ತು .

ನಷ್ಟದಹೊರತಾಗಿಯೂ,ಚಂದ್ರನ ಮೇಲ್ಮೈಗೆ ಬಹಳ ಹತ್ತಿರಕ್ಕೆ ಬಂದಿರುವುದು ಅದ್ಭುತ ಸಾಧನೆಯಾಗಿದೆ ಎಂದೂ ನಾಸಾ ಹೇಳಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಚಂದ್ರನ ದಕ್ಷಿಣ ದ್ರುವಕ್ಕೆ ಉಪಗ್ರಹ ಕಳಿಸುವ , ಇಳಿಸುವ ಕೆಲಸ, ಸಾಹಸವನ್ನು ಇದುವರೆಗೆ ಯಾವುದೆ ದೇಶ ಮಾಡಿರಲಿಲ್ಲ. ಇದರಲ್ಲಿ ಭಾರತದ ಪ್ರಯತ್ನ ಕೊನೆ ಘಳಿಗೆಯಲ್ಲಿ ನೀರಿಕ್ಷಿತ ಫಲಕೊಡಲಿಲ್ಲ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter