ಜಿಲ್ಲೆಯು ಅಂಖಡವಾಗಿರಲಿ

Share on facebook
Share on twitter
Share on linkedin
Share on whatsapp
Share on email


ಬೆಳಗಾಯಿತು ವಾರ್ತೆ
ಬಳ್ಳಾರಿ: ಬುಧವಾರ ಗೃಹಾ ಕಛೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷ್ಯತೆಯಲ್ಲಿ ನಡೆದ ಬಳ್ಳಾರಿ ವಿಭಜನೆಯ ಕುರಿತು ನಡೆದ ಸಭೆ ವಿಫಲವಾಗಿದ್ದು, ಬಳ್ಳಾರಿ ಅಖಂಡತೆಗೆ ಸಹಕರಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಬಳ್ಳಾರಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ ಎಲ್ಲರಿಗೂ ಅಭಿನಂದನೆ ಎಂದು ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡರಾದ ದರೂರು ಪುರುಷೋತ್ತಮಗೌಡ ಅವರು ಹೇಳಿದರು.

ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಬಳ್ಳಾರಿ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು, ಮುಂದೆಯು ಸಹ ಮುಖ್ಯಮಂತ್ರಿಗಳು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಲಹೆಯನ್ನು ಪಡೆಯದೇ ಏಕಾಏಕಿ ಇಂತಹ ನಿರ್ಧಾರ ತೆಗೆದುಕೊಂಡರೆ ಸಮಿತಿಯಿಂದ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ದರೂರು ಪುರುಷೋತ್ತಮಗೌಡ, ಕುಡುತಿನಿ ಶ್ರೀನಿವಾಸ, ಮೇಕಲ ಈಶ್ವರರೆಡ್ಡಿ ಮತ್ತಿತ್ತರು ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter