ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಳ, ಶಿಕ್ಷಾ ಬಂಧಿಗಳ ಬಿಡುಗಡೆ: ಸಚಿವ ಸಂಪುಟ ತೀರ್ಮಾನ ಸಾಧ್ಯತೆ

ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಳ, ಶಿಕ್ಷಾ ಬಂಧಿಗಳ ಬಿಡುಗಡೆ: ಸಚಿವ ಸಂಪುಟ ತೀರ್ಮಾನ ಸಾಧ್ಯತೆ


ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ವಿಧಾನ ಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಆಶಾ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಧನವನ್ನು 500ರೂ ಹೆಚ್ಚಳ ಮಾಡುವುದು. ನಿರ್ದಿಷ್ಟ ವರ್ಗದ 20 ಶಿಕ್ಞಾ ಬಂಧಿಗಳನ್ನು ಬಿಡುಗಡೆ ಮಾಡುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳಿಗೆ ಸಂಪುಟ ಅನುಮೋದನೆ ನೀಡುವ ನಿರೀಕ್ಷೆಯಿದೆ.

ಕೈಗಾರಿಕಾ ನೀತಿ ಅಡಿಯಲ್ಲಿ ಮೆಗಾ/ಅಲ್ಟ್ರಾ/ಸೂಪರ್ ಯೋಜನೆಗಳಿಗೆ ಕರ್ನಾಟಕ ಏರೋ ಸ್ಪೇಸ್ ನೀತಿ, ನೂತನ ಜವಳಿ ನೀತಿಯಡಿ ಬೃಹತ್ ಯೋಜನೆಗಳಿಗೆ ರಿಯಾಯಿತಿ ಮತ್ತು ವಿಶೇಷ ಉತ್ತೇಜನ ಮಂಜೂರು ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚನೆಗೆ ಸಂಪುಟ ಅನುಮೋದನೆ ನೀಡುವ ಸಾಧ್ಯತೆಯಿದೆ.

ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಧನವನ್ನು ನವೆಂಬರ್ 1ರಿಂದ 500 ಹೆಚ್ಚಳ ಮಾಡುವ, ಮಹಾತ್ಮ ಗಾಂಧಿ ಅವರ 150ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ನಿರ್ದಿಷ್ಟ ವರ್ಗದ 20 ಖೈದಿಗಳ ಬಿಡುಗಡೆ ಮಾಡುವ ಪ್ರಸ್ತಾವನೆಗಳಿಗೆ ಸಂಪುಟ ಒಪ್ಪಿಗೆ ನೀಡಲಿದೆ.

ರಕ್ತ ನಿಧಿ ಕೇಂದ್ರಗಳನ್ನು ಮತ್ತು ರಕ್ತ ಶೇಖರಣಾ ಘಟಕಗಳನ್ನು ಮೇಲ್ದರ್ಜೆಗೆ ಏರಿಸುವುದು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಉಪಕರಣಗಳನ್ನು ಖರೀದಿಸಲು 12 ಕೋಟಿ ರೂ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ, ಮಕ್ಕಳ ಆರೋಗ್ಯ ಕಾರ್ಯಕ್ರಮಕ್ಕೆ ಔಷದಿ ಮತ್ತು ಉಪಕರಣ ಸಲಕರಣೆಗಳನ್ನು ಖರೀದಿಸುವ ಪ್ರಸ್ತಾವನೆಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಬಾಗಲಕೋಟೆ ಜಮಖಂಡಿಯಲ್ಲಿ 100 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ವಸತಿ ಗೃಹ ಕಟ್ಟಡವನ್ನು 20.90 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುವ, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ರಟ್ಟಹಳ್ಳಿ ತೋಟಗಂಡಿ ಮತ್ತು ಕವಳಿಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡ ಪ್ರದೇಶವನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.