ರೈಲ್ವೆ ಸಮಸ್ಯೆ, ದೂರು, ದುಮ್ಮಾನಗಳಿಗೆ ಇನ್ನು ಒಂದೇ ಸಹಾಯವಾಣಿ

ರೈಲ್ವೆ ಸಮಸ್ಯೆ, ದೂರು, ದುಮ್ಮಾನಗಳಿಗೆ ಇನ್ನು ಒಂದೇ ಸಹಾಯವಾಣಿ

ನವದೆಹಲಿ :ರೈಲ್ವೆ ಪ್ರಯಾಣಿಕರು ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ, ದುಮ್ಮಾನಗಳಿಗೆ ದೂರು ನೀಡಲು ರೈಲ್ವೇ ಸಹಾಯವಾಣಿಗೆ ಕರೆ ಮಾಡಲು ನಾನಾ ಸಂಖ್ಯೆಗಳಿಗಾಗಿ ಇನ್ನೂ ಹುಡುಕಾಡಬೇಕಿಲ್ಲ ಹಾಗೂ ತಡಕಾಡಬೇಕಿಲ್ಲ.

ಕೇವಲ 139 ಸಂಖ್ಯೆಗೆ ಕರೆ ಮಾಡಿದರೆ, ಅದು ರೈಲ್ವೇ ತ್ವರಿತ ದೂರು ವಿಲೇವಾರಿ ಘಟಕ ಸಂಪರ್ಕಿಸಿ ಪ್ರಯಾಣಿಕರಿಗೆ ಅಗತ್ಯವಾದ ಸಹಾಯ, ನೆರವು ಒದಗಿಸಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಈ ಹಿಂದೆ, ಪ್ರಯಾಣಿಕರ ದೂರು- ದುಮ್ಮಾನಗಳನ್ನು ಆಲಿಸಲು ಅನೇಕ ಸಂಖ್ಯೆಗಳಿಗೆ ಕರೆ ಮಾಡಬೇಕಿತ್ತು ಈಗ ಇದೆಲ್ಲವನ್ನೂ ಬದಿಗೆ ಸರಿಸಿ, 139 ಸಂಖ್ಯೆಯೊಂದನ್ನೇ ಏಕಮಾತ್ರ, ಏಕಮೇವ ಸಂಖ್ಯೆಯನ್ನಾಗಿ ಮಾಡಲಾಗಿದೆ.

ಸುಲಭವಾಗಿ ನೆನಪಿಡಬೇಕಾದ ಈ ಸಂಖ್ಯೆಯನ್ನು ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಯಾವುದೇ ಸಾಮಾನ್ಯ ಮೊಬೈಲ್ ನಿಂದಲೂ ಕರೆ, ಡಯಲ್ ಮಾಡಬಹುದು. ಇಂಟರ್ಯಾಕ್ಟಿವ್ ವಾಯ್ಸ ರೆಸ್ಪಾನ್ಸ್ (ಐವಿಆರ್ಎಸ್) ಸೇವೆಗಳ ಆಧಾರದಲ್ಲೂ ಸೇವೆಗಳನ್ನು ಪಡೆಯಬಹುದಾಗಿದೆ.
ಆದರೆ, ರೈಲ್ವೇ ಸುರಕ್ಷತೆಗೆ ಮಾತ್ರ ದೂರು ನೀಡಲು ಮಾತ್ರ ಈ ಹಿಂದೆ ಚಾಲ್ತಿಯಲ್ಲಿದ್ದ 182 ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು, ಮುಂದುವರಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.