ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ

ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ

ಬೆಳಗಾಯಿತು ವಾರ್ತೆ
ಬಳ್ಳಾರಿ: ಇದು ನಮ್ಮ ದೇಶ, ನಮ್ಮೆಲ್ಲರ ದೇಶ. ಇಲ್ಲಿ ನಾವು ಶಾಂತಿ, ಸೌಹಾರ್ಧಯುತವಾಗಿ ಜೀವಿಸುತ್ತಿದ್ದೇವೆ. ಆದರೆ ಕೆಲವು ಕಿಡಿಗೇಡಿಗಳು ನಮ್ಮ ನಡುವೆ ದ್ವೇಷವನ್ನು ಹುಟ್ಟು ಹಾಕಲು ಪ್ರಯತ್ನ ಪಡುತ್ತಿದ್ದಾರೆ ಎಂದು ಶಾಸಕ ಸೋಮಶೇಖರರೆಡ್ಡಿ ಹೇಳಿದರು.

ನಗರದ ರಾಯಲ್ ಸರ್ಕಲ್‍ನಲ್ಲಿ ದೇಶ ಭಕ್ತ ನಾಗರಿಕ ವೇದಿಕೆಯು ಸಿಎಎ ಮತ್ತು ಎನ್‍ಆರ್‍ಸಿ ಪರ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಪೌರತ್ವ ಕಾಯ್ದೆಯು ಈಗಾಗಲೇ ಜಾರಿಯಾಗಿದ್ದು, ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ ಕೆಲವು ಕಿಡಿಗೇಡಿಗಳು, ಕಾಯ್ದೆಯ ವಿರುದ್ಧ ಅಪಪ್ರಚಾರ ಮಾಡುತ್ತಾ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರತಿಭಟನೆಯಲ್ಲಿ ಸರ್ಕಾರಿ ಆಸ್ತಿಯು ನಾಶವಾಗುತ್ತಿದೆ . ಕಾಯ್ದೆಯ ಕುರಿತು ತಿಳಿಸಲು ಇದೇ ಜ.12 ರಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರು ನಗರದ ಗಾಂಧೀ ಭವನಕ್ಕೆ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮೆರವಣಿಗೆಯಲ್ಲಿ ವೇದಿಕೆಯು ರಾಷ್ಟ್ರಪತಿಗಳಿಗೆ ಬರೆದಿರುವ ಮನವಿ ಪತ್ರವನ್ನು ಬಹಿರಂಗವಾಗಿ ವಾಚಿಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರವನ್ನು ರವಾನಿಸಲಾಯಿತು. ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ಮುಖಂಡರಾದ ಜಗಜ್ಜನ್ ಬಾತ್ರೆಜ್, ಮಲ್ಲೇಶ್, ಶ್ರೀ ರಾಮುಲು, ಅರುಣ, ಚನ್ನಬಸವನಗೌಡ, ಪಕ್ಕೀರಪ್ಪ, ಅನಿಲ್‍ನಾಯ್ಡು, ಮಣಿಪಾಲ್ ಮತ್ತು ಸಾವಿರಾರು ಜನರು ಹಾಜರಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.