ಸರಳವಾಗಿ ಮಹಾತ್ಮ ಗಾಂಧೀಜಿ ಮತ್ತು ಶಾಸ್ತ್ರೀಯವರ ಜಯಂತಿ ಆಚರಣೆ

Share on facebook
Share on twitter
Share on linkedin
Share on whatsapp
Share on email


ಬಳ್ಳಾರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿ ಆಚರಣೆಯು ಕೋವಿಡ್-೧೯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸರಳವಾಗಿ ಆಚರಿಸಲಾಯಿತು.


ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಮಹಾತ್ಮಾಗಾಂಧೀಜಿ, ಲಾಲ್ ಬಹದ್ದೂರ್ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪ ನಮನ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕರಾದ ಸಿದ್ಧಲಿಂಗೇಶ್. ಕೆ ರಂಗಣ್ಣನವರ್ ಅವರು ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳಾದ ಸಿದ್ಧಾರ್ಥ ಕಾರಂಜಿ, ವಿನೋದ್ ಕುಮಾರ್, ಶಾಷದ್ ಆಲಿ, ಎಂ.ಡಿ. ನಿಸಾರ್ ಅಹಮದ್, ರೂನಿ ಕಿರಣ್, ಗಾದಿಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter