ಬಿಬಿಎಂಪಿ ಮೇಯರ್ ಆದ ಸಿರುಗುಪ್ಪ ವಿದ್ಯಾರ್ಥಿ

ಬಿಬಿಎಂಪಿ ಮೇಯರ್ ಆದ ಸಿರುಗುಪ್ಪ ವಿದ್ಯಾರ್ಥಿ

ಬೆಳಗಾಯಿತು ವಾರ್ತೆ
ಸಿರುಗುಪ್ಪ:
ನಗರದ ಬಳ್ಳಾರಿ ರಸ್ತೆಯಲ್ಲಿರುವ ಎಸ್.ಇ.ಎಸ್.ಆಂಗ್ಲಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ 1994-95ನೇ ಸಾಲಿನ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ತಮ್ಮ ಸಹಪಾಟಿ ಎಂ.ಗೌತಮ್ ಕುಮಾರ್ ಬೆಂಗಳೂರಿನ ಮಹಾನಗರ ಪಾಲಿಕೆಯ ಮಹಾಪೌರರಾಗಿ ಚುನಾಯಿತರಾಗಿದ್ದಕ್ಕೆ ಸಿಹಿ ಹಂಚಿ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹಳೇ ವಿದ್ಯಾರ್ಥಿ ಡಾ.ಸತೀಶ್ ಹಿರೇಮಠ್ ಮಾತನಾಡಿ ಎಂ.ಗೌತಮ್ ಕುಮಾರ್ ಅವರ ತಂದೆ ಮದನ್‍ಲಾಲ್ ಜೈನ್‍ರೊಂದಿಗೆ ಸಿರುಗುಪ್ಪದಲ್ಲಿಯೇ ಬಹಳ ವರ್ಷಗಳ ಕಾಲ ವಾಸವಾಗಿದ್ದರು. ಅವರ ತಂದೆ ಕೃಷಿಗೆ ಸಂಬಂಧಿಸಿದ ವ್ಯವಹಾರವನ್ನು ನಡೆಸುತ್ತಿದ್ದರು. ಎಸ್.ಇ.ಎಸ್. ಆಂಗ್ಲಮಾಧ್ಯಮ ಶಾಲೆಯಲ್ಲಿಯೇ 10ನೇ ತರಗತಿಯವರೆಗೂ ವ್ಯಾಸಂಗ ನಡೆಸಿ ಉನ್ನತ ಶಿಕ್ಷಣಕ್ಕೆ ಬೆಂಗಳೂರಿಗೆ ತೆರಳಿದರು. ನಮ್ಮ ಸ್ನೇಹಿತರೊಬ್ಬರು ಬೆಂಗಳೂರು ಮಹಾನಗರದ ಮಹಾ ಪೌರರಾಗಿ ಆಯ್ಕೆಯಾಗಿರುವುದಕ್ಕೆ ನಮ್ಮ ಎಲ್ಲಾ ಸ್ನೇಹಿತರಿಗೂ ಸಂತೋಷವಾಗಿದ್ದು, ಅವರಿಂದ ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ದೊರೆಯಲಿ ಎಂದು ಅಭಿಪ್ರಾಯ ಪಟ್ಟರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.