ಎಸ್ಪಿಯಾಗಿ ಸೈದುಲ್ಲಾ ಅದಾವತ್ ಅಧಿಕಾರ ಸ್ವೀಕಾರ…

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಬಳ್ಳಾರಿ: ನೂತನ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೈದುಲ್ಲಾ ಅದಾವತ್ ಅವರು ಬುಧವಾರದಂದು ಅಧಿಕಾರ ಸ್ವೀಕರಿಸಿದರು.
ಬೆಳಿಗ್ಗೆ ೧೦ರ ಸುಮಾರಿಗೆ ನೂತನ ಎಸ್ಪಿಯಾಗಿ ಸೈದುಲ್ಲಾ ಅದಾವತ್ ಅವರು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಅಧಿಕಾರ ಹಸ್ತಾಂತರಿಸಲು ವಿಳಂಬ ಧೋರಣೆ ತೋರಿದ ಹಿನ್ನಲೆಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಂಜೆಯೊತ್ತಿಗೆ ನಡೆಯಿತು.
ಬುಧವಾರ ಬೆಳಿಗ್ಗೆಯೇ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲು ಸೈದುಲ್ ಅದಾವತ್ ಅವ

ರು ಬಳ್ಳಾರಿಯ ಜಿಮ್ ಖಾನಾದಲ್ಲಿ ಕಾಯುತ್ತಾ ಕುಳಿತಿದ್ದರು. ಆದರೆ, ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಮಾತ್ರ ಎಸ್ಪಿ ವೃತ್ತದಲ್ಲಿರುವ ತಮ್ಮ ನಿವಾಸದಲ್ಲಿಯೇ ಕುಳಿತು ಕಾಲಹರಣ ಮಾಡಿದರು. ಈಗ – ಆಗ ಬರಬಹುದು ಎಂಬ ಕಾತುರದಿಂದ ಕಾಯುತ್ತಾ ಕುಳಿತಿರೋ ನೂತನ ಎಸ್ಪಿ ಸೈದುಲ್ಲಾ ಅವರು, ಸರ್ಕಾರಿ ವಾಹನವನ್ನ ತಮ್ಮ ಬಳಿಯೇ ಇಟ್ಟುಕೊಂಡೇ ಕುಳಿತಿದ್ದರು. ಮಧ್ಯಾಹ್ನವಾದ್ರೂ ಕೂಡ ನಿರ್ಗಮಿತ ಎಸ್ಪಿ ಬಾಬಾ ಅವರು, ಪೊಲೀಸ್ ಜಿಮ್ ಖಾನ್ ಹತ್ತಿರ ಕೂಡ ಸುಳಿಯಲಿಲ್ಲ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter