ಲಾಕ್ ಡೌನ್ ನಂತರ ‘ಪ್ರಾರಂಭ’ ಚಿತ್ರತಂಡದಿಂದ ನೂತನ ಚಿತ್ರ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಜೇನುಶ್ರೀ ತನುಷ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಜಗದೀಶ್ ಕಲ್ಯಾಡಿ ಅವರು ನಿರ್ಮಿಸಿ, ಮನು ಕಲ್ಯಾಡಿ ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ನಾಯಕರಾಗಿ ನಟಿಸಿರುವ ಪ್ರಾರಂಭ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಲಾಕ್ ಡೌನ್ ನಂತರ ತೆರೆ ಕಾಣಲಿದೆ. ಈಗಾಗಲೇ ಚಿತ್ರ ಬಿಡುಗಡೆಗೆ ಸಿನಿರಸಿಕರು ಕಾತುರದಲಿದ್ದಾರೆ.

ಪ್ರಾರಂಭದ ಮೂಲಕ ಚಿತ್ರರಂಗದಲ್ಲಿ ಶುಭಾರಂಭ ಮಾಡಲಿರುವ ನಿರ್ಮಾಪಕ ಜಗದೀಶ್ ಕಲ್ಯಾಡಿ ಹಾಗೂ ನಿರ್ದೇಶಕ ಮನು ಕಲ್ಯಾಡಿ ಅವರ ಕಾಂಬಿನೇಶನ್ ನಲ್ಲಿ ಮತ್ತೊಂದು ಅದ್ದೂರಿ ಚಿತ್ರ ನಿರ್ಮಾಣ ವಾಗಲಿದೆ.ಈ ಚಿತ್ರದ ನಾಯಕರಾಗಿ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರು ನಟಿಸಲಿದ್ದು, ತಾರಾಗಣ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ದೇಶಕ ಮನು ಕಲ್ಯಾಡಿ ತಿಳಿಸಿದ್ದಾರೆ.ಲಾಕ್ ಡೌನ್ ಮುಗಿದು, ಚಿತ್ರೀಕರಣಕ್ಕೆ ಅನುಮತಿ ದೊರಕಿದ ಕೂಡಲೆ ಈ ನೂತನ ಚಿತ್ರದ ಚಿತ್ರೀಕರಣ ‘ಪ್ರಾರಂಭ’ವಾಗಲಿದೆ.

ಕೊರೋನಾ ಲಾಕ್ ಡೌನ್ ನಂತರ ಚಿತ್ರ ನಿರ್ಮಾಣಕ್ಕೆ ಮುಂದಾಗುವವರರು ಕಡಿಮೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಆದರೆ ಒಂದು ಚಿತ್ರ ಬಿಡುಗಡೆ ಹಂತದಲ್ಲಿರಬೇಕಾದರೆ ಮತ್ತೊಂದು ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಸಹೋದರರಾದ ನಿರ್ಮಾಪಕ ಜಗದೀಶ್ ಕಲ್ಯಾಡಿ ಹಾಗೂ ನಿರ್ದೇಶಕ ಮನು ಕಲ್ಯಾಡಿ ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter