ಸಾಹಸ ಸಿಂಹ ನಮ್ಮೆದೆಯ ನಂದಾದೀಪ’ ಕಿಚ್ಚ ಸುದೀಪ್

ಸಾಹಸ ಸಿಂಹ ನಮ್ಮೆದೆಯ ನಂದಾದೀಪ’ ಕಿಚ್ಚ ಸುದೀಪ್

ಬೆಂಗಳೂರು: ಕನ್ನಡ ಚಿತ್ರರಂಗದ ಧೀಮಂತ ನಟ, ಕಲಾ ದೇವಿಯ ಪುತ್ರ ವಿಷ್ಣು ವರ್ಧನ್ ಅಭಿಮಾನಿಗಳನ್ನು ಅಗಲಿ ಸರಿಸುಮಾರು 10 ವರ್ಷಗಳೇ ಕಳೆದಿದೆ. ಆದರೆ ಅವರ ಸಿನಿಮಾಗಳ ಮೂಲಕವಾಗಿ ಅಭಿಮಾನಿಗಳ ಪ್ರಿತಿಯಲ್ಲಿ ಸದಾ ಚಿರಸ್ಥಾಯಿಯಾಗಿದ್ದಾರೆ
ಪುಣ್ಯಸ್ಮರಣೆಯ ದಿನ ಸಾಹಸ ಸಿಂಹನನ್ನು ಇಡೀ ಚಿತ್ರರಂಗ ನೆನೆಪು ಮಾಡಿಕೊಂಡಿದ್ದು, ಹಲವು ನಟರು ವಿಷ್ಣುದಾದಾ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಮಾತಾಡು ಮಾತಾಡು ಮಲ್ಲಿಗೆ ಚಿತ್ರದಲ್ಲಿ ವಿಷ್ಟು ಅವರೊಂದಿಗೆ ಅಭಿನಯಿಸಿದ್ದ ಕಿಚ್ಚ ಸುದೀಪ ಟ್ವೀಟ್ ಮಾಡಿದ್ದು,
“ಅಪ್ಪಾಜಿ. . . .ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ” ಎಂದು ಹೇಳಿದ್ದಾರೆ.

ಇನ್ನು `ಈ ಬಂಧನ’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಷ್ಟುವರ್ಧನ್ ಅವರ ಸಾಕು ಮಗನ ಪಾತ್ರದಲ್ಲಿ ನಟಿಸಿದ್ದರು. ಅದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದಿರುವ ದಚ್ಚು ವಿಷ್ಣು ವರ್ಧನ್ ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.
“ಮರೆಯಾದರೂ ಮರೆಯಲಾಗದ ಮಾಣಿಕ್ಯ, ಸಾಹಸ ಸಿಂಹ, ಅಭಿನವ ಭಾರ್ಗವ,ವಿಷ್ಣು ದಾದ ಜನರ ಮನದಲ್ಲಿ ಅಜರಾಮರ” ಎಂದು ಭಾವುಕರಾಗಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.