ಹೊಸ ವರ್ಷಕ್ಕೆ ಬರ್ತಿದ್ದಾನೆ ರಾಜೀವ’ ಐಎಎಸ್ ರೈತನಾಗಿ ಮಯೂರ್ ಪಟೇಲ್

ಹೊಸ ವರ್ಷಕ್ಕೆ ಬರ್ತಿದ್ದಾನೆ ರಾಜೀವ’ ಐಎಎಸ್ ರೈತನಾಗಿ ಮಯೂರ್ ಪಟೇಲ್

ಬೆಂಗಳೂರು: ಆರ್ ಕೆ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಜಿ.ಎಮ್.ರಮೇಶ್ ಹಾಗೂ ಕಿರಣ್ ಕೆ ಅವರು ನಿರ್ಮಿಸಿರುವ ರಾಜೀವ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

ಐಎಎಸ್ ಯುವ ರೈತ’ ಎಂಬ ಅಡಿಬರಹವಿರುವ ಚಿತ್ರ ರೈತರು ಹಾಗೂ ವ್ಯವಸಾಯ ಕ್ಷೇತ್ರದಲ್ಲಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವುದರ ಜತೆಗೆ, ನಗರದೆಡೆ ಮುಖ ಮಾಡಿರುವ ಯುವ ಸಮುದಾಯ ಮತ್ತೆ ಭೂ ತಾಯಿಯ ಸೇವೆಗೆ ಮರಳಲು ಪ್ರೇರಣೆ ನೀಡುವ ಸಂದೇಶ ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ

ಚಿತ್ರದ ನಾಯಕ ಮಯೂರ್ ಪಟೇಲ್ 3 ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ “ಯುವ ರೈತ, ಆತನ ತಂದೆ ಹಾಗೂ ತಾತನ ಪಾತ್ರದಲ್ಲಿ ಅಭಿನಯಿಸಿದ್ದು, ಈವರೆಗಿನ ಚಿತ್ರಗಳಿಗೆ ಹೋಲಿಸಿದರೆ ಸವಾಲಿನದಾಗಿತ್ತು ಇದು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ ಐಎಎಎಸ್ ಮುಗಿಸಿ ಸೇವೆ ಸಲ್ಲಿಸುತ್ತಿದ್ದ ಯುವಕ ಹಲವು ಕಾರಣಗಳಿಂದ ಮತ್ತೆ ಕೃಷಿಯತ್ತ ಮುಖ ಮಾಡುವ ಕಥೆಯನ್ನು ಚಿತ್ರ ಒಳಗೊಂಡಿದೆ” ಎಂದಿದ್ದಾರೆ

¥sóÉ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕ ಜಿ.ಎಮ್.ರಮೇಶ್ ಕಥೆ ಬರೆದಿದ್ದಾರೆ. ಆನಂದ ಇಳೆಯರಾಜ ಛಾಯಾಗ್ರಹಣ, ವಿಜಯ್ ಸೋವರ್ ಸಂಕಲನ ಹಾಗೂ ವರ್ಧನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಕಾಕೋಳು ರಾಮಯ್ಯ ಸಂಭಾಷಣೆ ಬರೆದಿದ್ದಾರೆ ಶೇಖರ್ ಸೋವರ್ ಹಾಡುಗಳನ್ನು ರಚಿಸಿದ್ದಾರೆ.

ಮಯೂರ್ ಪಟೇಲ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ, ಅಕ್ಷತ ಶ್ರೀಧರ್‍ಶಾಸ್ತ್ರಿ, ಶಂಕರ್ ಅಶ್ವತ್, ಮದನ್ ಪಟೇಲ್, ನಿಹಾರಿಕ, ವರ್ಧನ್, ಬಸವರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.