ಪಂಗಾ ಚಿತ್ರದ ಟ್ರೇಲರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೀಪಿಕಾ

ಪಂಗಾ ಚಿತ್ರದ ಟ್ರೇಲರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೀಪಿಕಾ

ಮುಂಬೈ: ಬಾಲಿವುಡ್ ನ ನಟಿ ಕಂಗನಾ ರಣಾವತ್ ಅವರು ಅಭಿನಯಿಸಿರುವ ಪಂಗಾ ಚಿತ್ರ ಟ್ರೇಲರ್ ವೀಕ್ಷಿಸಿದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕಂಗನಾ ಅವರ ಪಂಗಾ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದ್ದು, ಅಭಿಮಾನಿಗಳನ್ನು ಆಕರ್ಷಿಸಿದೆ. ಈ ಬಗ್ಗೆ ದೀಪಿಕಾ ಅವರಿಗೆ ಕೇಳಿದಾಗ ಟ್ರೇಲರ್ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ದಾರೆ.

“ಈ ರೀತಿಯ ಚಿತ್ರಗಳು ಅಭಿಮಾನಿಗಳ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದು ಸಂತಸ ತಂದಿದೆ. ಸಮಯ ಸಿಕ್ಕಾಗ ಚಿತ್ರಗಳನ್ನು ವೀಕ್ಷಿಸುವುದಾಗಿ ತಿಳಿಸಿದ್ದಾರೆ. ಕಂಗನಾ ಅವರ ಅಭಿನಯ ಹಾಗೂ ಟ್ರೇಲರ್ ನೋಡಿದರೆ, ಅಭಿಮಾನಿಗಳನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದು ತಿಳಿದು ಬಂದಿದೆ.
ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ಕಂಗನಾ, ಜಾಸ್ಸಿ ಗಿಲ್, ರಿಚಾ ಚಾಧಾ ಮತ್ತು ನೀತಾ ಗುಪ್ತಾ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು 24 ಜನವರಿ 2020 ರಂದು ಬಿಡುಗಡೆಯಾಗಲಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.