ಸಿಖ್ ಧರ್ಮಗುರು ಗುರು ಗೋವಿಂದ್ ಸಿಂಗ್ ಅವರಿಗೆ ಪ್ರಧಾನಿ ಗೌರವ ಸಮರ್ಪಣೆ

Share on facebook
Share on twitter
Share on linkedin
Share on whatsapp
Share on email

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ಹತ್ತನೇ ಸಿಖ್ ಗುರು, ಗುರು ಗೋವಿಂದ್‌ ಸಿಂಗ್‌ ಅವರ ಪ್ರಕಾಶ್ ಪರ್ವ ದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು.

ಶ್ರೀ ಗುರು ಗೋವಿಂದ್ ಸಿಂಗ್‌ ಜಿ ಅವರ ಪ್ರಕಾಶ್ ಪರ್ವದ ಅಂಗವಾಗಿ ಅವರಿಗೆ ನಮನ ಸಲ್ಲಿಸುತ್ತೇನೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
ಹತ್ತನೇ ಸಿಖ್ ಗುರು, ಗುರು ಗೋವಿಂದ್‌ ಸಿಂಗ್ ಅವರು ಆಧ್ಯಾತ್ಮಿಕ ಗುರು, ಯೋಧ, ಕವಿ ಮತ್ತು ದಾರ್ಶನಿಕರಾಗಿದ್ದರು.

ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ಅವರ ತಂದೆ ಗುರು ತೇಜ್ ಬಹದ್ದೂರ್ ಅವರನ್ನು ಶಿರಚ್ಛೇದ ಮಾಡಿದಾಗ, ಗುರು ಗೋವಿಂದ್ ಸಿಂಗ್ ಅವರನ್ನು ಒಂಬತ್ತನೇ ವಯಸ್ಸಿನಲ್ಲಿ ಸಿಖ್ಖರ ನಾಯಕನಾಗಿ ಔಪಚಾರಿಕವಾಗಿ ಘೋಷಿಸಲಾಯಿತು. ಅವರು 10ನೇ ಸಿಖ್ ಗುರುವಾಗಿ ಕಾರ್ಯನಿರ್ವಹಿಸಿದರು.
ಅವರ ಜೀವಿತಾವಧಿಯಲ್ಲಿ ಅವರ ನಾಲ್ಕು ಗಂಡು ಮಕ್ಕಳು ಕೂಡ ಮೃತಪಟ್ಟಿದ್ದರು. ಇಬ್ಬರು ಯುದ್ಧದಲ್ಲಿ ಮಡಿದರೆ ಇನ್ನಿಬ್ಬರನ್ನು ಮೊಘಲ್ ಸೈನ್ಯದಿಂದ ಗಲ್ಲಿಗೇರಿಸ್ಪಟ್ಟಿದ್ದರು.

ಜನವರಿ 5, 1666 ರಂದು ಜನಿಸಿದ ಗುರು ಗೋವಿಂದ್‌ ಸಿಂಗ್ 1708 ರ ಅಕ್ಟೋಬರ್ 7 ರಂದು ಕೊನೆಯುಸಿರೆಳೆದರು.
ಮೂರು ವರ್ಷಗಳ ಹಿಂದೆ, 350 ನೇ ಪ್ರಕಾಶ್ ಪರ್ವ್ (ಪ್ರಕಾಶ್ ಉತ್ಸವ ಎಂದೂ ಕರೆಯುತ್ತಾರೆ) 2017 ರ ಜನವರಿಯಲ್ಲಿ ಪಾಟ್ನಾ ಮತ್ತು ವಿಶ್ವದ ಇತರ ಭಾಗಗಳಲ್ಲಿ ಧಾರ್ಮಿಕ ಉತ್ಸಾಹವಾಗಿ ಆಚರಿಸಲಾಗಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter