ಉಪ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಗೆಲ್ಲದಿದ್ದಲ್ಲಿ ಸರ್ಕಾರ ಪತನ

ಉಪ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಗೆಲ್ಲದಿದ್ದಲ್ಲಿ ಸರ್ಕಾರ ಪತನ

ಬೆಂಗಳೂರು:ಯಡಿಯೂರಪ್ಪನವರ ಸರ್ಕಾರ ಪೂರ್ಣ ಬಹುಮತಗಳಿಸಲು ಉಪ ಚುನಾವಣೆಯಲ್ಲಿ ಕನಿಷ್ಟ 7 ಕ್ಷೇತ್ರ ಗೆಲ್ಲಲೇಬೇಕು ಇಲ್ಲದಿದ್ದಲ್ಲಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ಟ್ವಿಟರ್​ನಲ್ಲಿ ಮುಖ್ಯಮಂತ್ರಿ ಅವರ ಕಾಲೆಳೆದಿದ್ದಾರೆ.

ಉಪ ಚುನಾವಣೆಯಲ್ಲಿ ಕನಿಷ್ಠ 7 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಗೆ ಖಂಡಿತಾ ಸಾಧ್ಯವಿಲ್ಲ.ಹೀಗಾಗಿ ಸರ್ಕಾರ ಮುಂದುವರೆಯುವುದಾದರೂ ಹೇಗೆ? ಎಂದು ಇದೇ ಕಾರಣಕ್ಕೆ ಮಧ್ಯಂತರ ಚುನಾವಣೆ ಬರು ತ್ತದೆ ಎಂದು ನಾನು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.

ಸರ್ಕಾರದ ವಿರುದ್ಧ ಸರಣಿ ಟ್ವಿಟ್​​ ಮಾಡಿರುವ ಅವರು,ನೆರೆ ಯಿಂದ 2,47,628 ಮನೆಗಳು ಬಿದ್ದಿವೆ ಎಂದು ಕೇಂದ್ರ ಸರ್ಕಾರ ಕ್ಕೆ ವರದಿ ಸಲ್ಲಿಸಿದ್ದೀರಿ.92,920 ಸಾವಿರ ಮನೆಗಳಿಗೆ ಹಾನಿ ಯಾಗಿದೆ ಎಂದು ಜಾಹಿರಾತಿನಲ್ಲಿ ಕೊಟ್ಟಿರುವ ಲೆಕ್ಕ.ಈ ಎರಡರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು ಎಂದು ಅವರು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದರು.

ಪ್ರವಾಹ ಬಂದು 90 ದಿನಗಳಾಗುತ್ತಿದೆ.ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ.ಇದನ್ನು ಹೇಳಿದರೆ ನಾನು ಸುಳ್ಳು ಹೇಳುತ್ತೇನೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. 4 ದಶಕಗಳ ಕಾಲ ರಾಜಕೀಯದ ಲ್ಲಿದ್ದು, ಶಾಸಕನಿಂದ ಮುಖ್ಯಮಂತ್ರಿಯವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೇನೆ.13 ಬಾರಿ ಬಜೆಟ್ ಮಂಡಿಸಿದ್ದೇನೆ. ಎಲ್ಲಿಂದ ಮಾಹಿತಿ ಪಡೆಯಬೇಕೆಂಬ ಕನಿಷ್ಠ ಮಾಹಿತಿ ನನಗೆ ತಿಳಿದಿಲ್ಲವೇ ? ಎಂದು ಸರ್ಕಾರವನ್ನು ಕೆಣಕಿದ್ದಾರೆ

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.