ಯುಜಿಸಿ ಹೊಸ ಮಾರ್ಗ ಸೂಚಿ ನಂತರವೇ ಕಾಲೇಜು ತರಗತಿ ಆರಂಭ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ರಾಜ್ಯದಲ್ಲಿ ಕಾಲೇಜು ತರಗತಿ ಆರಂಭ ಮಾಡುವ ಬಗ್ಗೆ ಯುಜಿಸಿ ಹೊಸ ಮಾರ್ಗ ಸೂಚಿ ಬಂದ ನಂತರವೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉನ್ನತಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.


ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳ ಆನ್’ಲೈನ್ ತರಗತಿಗಳು ನಡೆಯುತ್ತಿದ್ದು, ಇದು ಹೀಗೆಯೇ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು .
ಯುಜಿಸಿಯ ಮುಂದಿನ ಆದೇಶದ ಬರುವರೆಗೂ ಕಾಲೇಜು ತರಗತಿ ಆರಂಭ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.


ಕಾಲೇಜು ತರಗತಿ ಆರಂಭದ ಕುರಿತು ಈ ವರೆಗೂ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಂಡಿಲ್ಲ. ನವೆಂಬರ್ 1ರಿಂದ ಪ್ರವೇಶ ಆರಂಭಿಸುವಂತೆ ಯುಜಿಸಿ ತಿಳಿಸಿತ್ತು. ಆದರೆ ಬದಲಾದ ನೂತನ ಮಾರ್ಗಸೂಚಿಗಳಿಗಾಗಿ ಸರ್ಕಾರ ಕಾಯುತ್ತಿದೆ ಎಂದು ಹೆಚ್ಚುವರಿ ಶಿಕ್ಷಣ ಆಯುಕ್ತ ಪ್ರದೀಪ್ ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter