ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಿಲಕ್‍ ಕೊಡುಗೆ ಅಪಾರ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ 100 ನೇ ಪುಣ್ಯತಿಥಿ ಅಂಗವಾಗಿ ಗೌರವ ನಮನ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಾತಂತ್ರ್ಯ ಚಳವಳಿಗೆ ತಿಲಕ್‍ ನೀಡಿದ ಕೊಡುಗೆ ಹೋಲಿಸಲಾಗದು ಎಂದು ಹೇಳಿದ್ದಾರೆ.‘ತಿಲಕ್‍ ಅವರು ತಮ್ಮ ಜೀವನದ ಪ್ರತಿ ಕ್ಷಣವೂ ರಾಷ್ಟ್ರಕ್ಕೆ ಹೋರಾಡಿದರು. ಕ್ರಾಂತಿಕಾರಿ ಸೈದ್ಧಾಂತಿಕ ಪೀಳಿಗೆಯನ್ನು ಸೃಷ್ಟಿಸಿದರು. ಸ್ವರಾಜ್ಯಕ್ಕೆ ಅವರು ನೀಡಿದ ಕರೆ ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯರಲ್ಲಿ ಧೈರ್ಯ ಮತ್ತು ನಂಬಿಕೆಯನ್ನು ಹುಟ್ಟುಹಾಕಿತ್ತು. ತಿಲಕ್‍ ಅವರು ಅಸ್ಪೃಶ್ಯತೆಯ ತೀವ್ರ ವಿರೋಧಿಯಾಗಿದ್ದರು. ಜಾತಿ ಮತ್ತು ಪಂಥಗಳ ಆಧಾರದ ಮೇಲೆ ವಿಭಜಿಸಲ್ಪಟ್ಟ ಸಮಾಜವನ್ನು ಒಂದುಗೂಡಿಸಲು ಮಹಾ ಚಳವಳಿಯನ್ನೇ ಆರಂಭಿಸಿದರು’ ಎಂದು ಅಮಿತ್‍ ಶಾ ಟ್ವೀಟ್‍ ಮಾಡಿದ್ದಾರೆ.

ಬ್ರಿಟಿಷ್ ಆಡಳಿತಗಾರರಿಂದ ಭಯಭೀತರಾಗಿದ್ದ ಜನರನ್ನು ಪ್ರೇರೇಪಿಸಲು ತಿಲಕ್‍ ಅವರು ಗಣೇಶ ಉತ್ಸವವನ್ನು ಸ್ವಾತಂತ್ರ್ಯ ಚಳವಳಿಗೆ ಸಾರ್ವಜನಿಕ ಉತ್ಸವವಾಗಿ ಆರಂಭಿಸಿದರು ಎಂದು ಅವರು ಹೇಳಿದ್ದಾರೆ.

‘ಲೋಕಮಾನ್ಯ ತಿಲಕ್ ಜಿ ಅವರ ಅಧ್ಯಯನ ಕೇವಲ ಒಂದು ವಿಷಯಕ್ಕೆ ಸೀಮಿತವಾಗಿರಲಿಲ್ಲ. ಅವರ ಆಲೋಚನೆಗಳು, ಕೃತಿಗಳು ಮತ್ತು ಸಂಶೋಧನೆಗಳು ಅವರಲ್ಲಿದ್ದ ಆಳವಾದ ಚಿಂತನೆಯನ್ನು ಪ್ರತಿಬಿಂಬಿಸುತ್ತವೆ. ದೇಶವು ಗುಲಾಮಗಿರಿ ಅಡಿಯಲ್ಲಿ ಸಿಕ್ಕಿಬಿದ್ದಾಗ, ‘ಕರ್ಮಯೋಗ’ ಅಗತ್ಯವೇ ಹೊರತು ಮೋಕ್ಷ ಅಥವಾ ಭಕ್ತಿಯಲ್ಲ ಎಂದು ನಂಬಿದ್ದವರು.’ ಎಂದು ಅಮಿತ್ ಶಾ ಸ್ಮರಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter