ವಿಪಕ್ಷ ನಾಯಕರಿಗೆ ಯಾರು ನೋಟೀಸ್ ನೀಡಬೇಕೆಂಬ ಕನಿಷ್ಟ ಅರಿವಿಲ್ಲದೆ ತಿಳಿವಳಿಕೆ ಪತ್ರ ಕಳುಹಿಸಿದ್ದಾರೆ

Share on facebook
Share on twitter
Share on linkedin
Share on whatsapp
Share on email

ಮಂಡ್ಯ: ಕೋವಿಡ್ ಗಾಗಿ ಖರ್ಚು ಮಾಡಿರುವ ಲೆಕ್ಕ ಕೊಡಿ ಎಂದು ಸರ್ಕಾರವನ್ನ ಪ್ರಶ್ನಿಸಿ ದರೆ, ಸಚಿವ ಆರ್.ಅಶೋಕ್ ಹೇಳ್ತಾರೆ ಸಿದ್ದರಾಮಯ್ಯ ಯಾರು ಲೆಕ್ಕ ಕೇಳೋಕೆ ಅಂತಾರೆ.ರಾಜ್ಯದ ಪ್ರತೀ ಪ್ರಜೆ ಗೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಇದೆ.ಸಚಿವರಿಗೆ ಸಂವಿಧಾನದ ಅರಿವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ವೈದ್ಯಕೀಯ ಉಪಕರಣ ಖರೀದಿಯಲ್ಲಿ ಸರ್ಕಾರ ಭ್ರಷ್ಟಾಚಾರ ಮಾಡಿದೆ.ಕರ್ನಾಟಕದಲ್ಲಿ ಇದುವರೆಗೆ, 1,16,638 ಜನಕ್ಕೆ ಕೊರೊನಾ ಸೋಂಕಿಗೆ ತುತ್ತಾಗಿ ದ್ದಾರೆ.ಎರಡು ಸಾವಿರ ಜನರು ಕೋವಿಡ್ ಮತ್ತು ಚಿಕಿತ್ಸೆ ಸಿಗದೆ ಸತ್ತಿದ್ದಾರೆ.ನಾವು ಕೊರೊನಾಗಾಗಿ ನಾಲ್ಕು ಸಾವಿರ ಕೋಟಿ ಖರ್ಚು ಮಾಡಿದ್ದೇವೆಂದು ಸರ್ಕಾರದ ದಾಖಲೆಗಳು ಹೇಳುತ್ತಿವೆ.ಆದರೆ ಸರ್ಕಾರ ಯಾವುದಕ್ಕೆ ಖರ್ಚು ಮಾಡಿದೆ,ಎಷ್ಟು ಖರ್ಚು ಮಾಡಿದೆ.ಹೇಗೆ ಖರ್ಚು ಮಾಡಿದೆ ಎಂಬ ಲೆಕ್ಕಕೊಡಿ ಎಂದು ಕೇಳುತ್ತಿದ್ದೇನೆ ಎಂದು ಅವರು ಪ್ರಶ್ನಿಸಿದರು.

ಕೋವಿಡ್ ಕೇರ್ ಸೆಂಟರ್,ಆಸ್ಪತ್ರೆಗಳಲ್ಲಿ ಎಲ್ಲಿ ಹೋದರು ಹಾಸಿಗೆ ಇಲ್ಲ, ಔಷಧಿ ಇಲ್ಲ.ಊಟ ಸಮರ್ಪಕವಾಗಿ ಕೊಡುತ್ತಿಲ್ಲ,ಆ್ಯಂಬುಲೆನ್ಸ್ ಗಳಿಲ್ಲ,ಡೆಡ್ ಬಾಡಿಗಳನ್ನು ಕಸದ ಥರ ಸುರಿಯು ತ್ತಿದ್ದಾರೆ.ಕೋವಿಡ್​ಗೆ ಸಂಬಂಧಿಸಿ ದಂತೆ ಸರ್ಕಾರ ಯಾವ ಮುಂಜಾಗ್ರತೆ ಕ್ರಮಕೈಗೊಂಡಿಲ್ಲ,ಪ್ರಧಾನಿ ಮೋದಿ ಅವರ ಮಾತು ಕೇಳಿ ಜನ ಶಂಖ,ಜಾ ಗಟೆ ಬಾರಿಸಿದ್ರು ಆದರೆ ಕೊರೊನಾ ಕಡಿಮೆ ಆಗಲಿಲ್ಲ,ಇದೀಗ ವಿಶ್ವದಲ್ಲಿ ಕೊರೋನಾ ಸೋಂಕಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.ಮೊದಲ ಸ್ಥಾನಕ್ಕೆ ಭಾರತ ಬಂದರೂ ಆಶ್ಚರ್ಯ ಇಲ್ಲ ಎಂದು ಅವರು ವ್ಯಂಗ್ಯವಾ ಡಿದರು.

ರಾಜ್ಯದ ಓರ್ವ ಮಂತ್ರಿಯೂ ಸಹ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ,ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ,ನಾನು ರಾಜ್ಯದ ಮುಖ್ಯಮಂತ್ರಿ ಆಗಿದ್ದರೆ ಎಲ್ಲಾ ಜನಕ್ಕೆ ತಲಾ ಹತ್ತು ಸಾವಿರ ಹಣ ಘೋಷಿಸುವೆ.ಆದರೆ ಘೋಷಿಸಿ ಪ್ಯಾಕೇಜನ್ನು ಸರ್ಕಾರಿ ಸರಿಯಾಗಿ ಬಿಡುಗಡೆ ಮಾಡದೆ ಅವರಿಗೂ ಸತಾಯಿಸುತ್ತಿದ್ದಾರೆಂದು ಆರೋಪಿ ಸಿದರು.

ಸಿದ್ದರಾಮಯ್ಯ,ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೀಡಿರುವ ನೋಟೀ ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಲೀಗಲ್ ನೋಟಿಸ್​ಗೆ ಕಾಯ್ದಿದ್ದೆ,ಅವರು ನೋಟೀಸ್ ಕೊಟ್ಟಿದ್ದಾರೆ ಸಂತೋಷ.ನನಗೆ ಮತ್ತು ಡಿ.ಕೆ.ಶಿವ ಕುಮಾರ್​ಗೆ ಕಾರಣಕೇಳಿ ನೋಟೀಸ್ ಕೊಟ್ಟಿ ದ್ದಾರೆ.ವಿಪಕ್ಷಗಳ ನಾಯಕರಿಗೆ ಮುಖ್ಯಮಂತ್ರಿ ಅಥವಾ ಸಚಿವರು ಅಥವಾ ಸರ್ಕಾರದ ಕಾರ್ಯದರ್ಶಿ ನೋಟೀಸ್ ನೀಡಬೇಕು.ಆದರೆ ವಿಧಾನ ಪರಿಷತ್ ಸದಸ್ಯರಿಂದ ನೋಟೀಸ್ ಕಳುಹಿಸಿದ್ದಾರೆ ಎಂದು ಸರ್ಕಾರದ ಕಾನೂನು ಅರಿವಿನ ಬಗ್ಗೆ ವ್ಯಂಗ್ಯವಾಡಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter