ವಿರಾಟ್ – ಧೋನಿ ನಡುವೆ ನಾಯಕತ್ವ ಹೋಲಿಸಿದ ಕುಲ್ದೀಪ್ ಯಾದವ್

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಬಳಿಕ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಂಡ ಸ್ಟಾರ್ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿ ಅವರ ನಾಯಕತ್ವವನ್ನು ಆಗಾಗ ಕ್ಯಾಪ್ಟನ್ ಕೂಲ್ ಜೊತೆಗೆ ಹೋಲಿಕೆ ಮಾಡುತ್ತಾ ಬರಲಾಗಿದೆ.ಇದೀಗ ಭಾರತ ತಂಡದ ಸ್ಟಾರ್ ಸ್ಪಿನ್ನರ್ ಚೈನಾಮನ್ ಬೌಲಿಂಗ್ ಶೈಲಿಯ ಕುಲ್ದೀಪ್ ಯಾದವ್ ಪತ್ರಿಕೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ವಿರಾಟ್ ಮತ್ತು ಧೋನಿ ನಾಯಕತ್ವದಲ್ಲಿನ ಪ್ರಮುಖ ವ್ಯತ್ಯಾಸಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ” ಯುವ ಆಟಗಾರರಿಗೆ ತಂಡದ ನಾಯಕ ಆನ್ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್‍ನಲ್ಲಿ ಬೆಂಬಲ ನೀಡುತ್ತಿದ್ದರೆ ಆತನಲ್ಲಿ ಉತ್ತಮ ಪ್ರದರ್ಶನ ನೀಡುವ ತುಡಿತ ಹೆಚ್ಚಾಗುತ್ತದೆ. ವಿರಾಟ್ ಭಾಯ್ ನನಗೆ ಈ ರೀತಿಯ ಬೆಂಬಲ ನೀಡುತ್ತಾರೆ. ಕಠಿಣ ಪರಿಸ್ಥಿತಿಗಳಲ್ಲಿ ಅವರು ನನಗೆ ಬೆಂಬಲಿಸಿದ್ದಾರೆ. ಬೌಲರ್ ಯಾವ ಮನಸ್ಥಿತಿಯಲ್ಲಿ ಇದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ವಿರಾಟ್ ಅವರಲ್ಲಿದೆ. ಹೀಗಾಗಿ ಎಲ್ಲಿ ಬೌಲಿಂಗ್ ಮಾಡಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಸಮಸ್ಯೆಗೆ ಪರಿಹಾರ ಸೂಚಿಸಿ ವಿಕೆಟ್ ಪಡೆಯಲು ನೆರವಾಗುತ್ತಾರೆ,” ಎಂದು ಹೇಳಿದ್ದಾರೆ.

“ವಿರಾಟ್ ವಿಶ್ವ ಶ್ರೇಷ್ಠ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ನಿರ್ಧಾರಗಳನ್ನು ಕೈಗೊಳ್ಳುವುದರಲಿ ಅವರು ಅಪ್ರತಿಮರು. ವಿರಾಟ್‍ಗೆ ಸರಿಸಾಟಿ ಯಾರೂ ಇಲ್ಲ,” ಎಂದು ಹಾಲಿ ನಾಯಕನನ್ನು ಕುಲ್ದೀಪ್ ಗುಣಗಾನ ಮಾಡಿದ್ದಾರೆ.”ನಾವೆಲ್ಲರೂ ಎಂಎಸ್ ಧೋನಿ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಮಾಹಿ ಭಾಯ್‍ನ ಬಹುದೊಡ್ಡ ಅಭಿಮಾನಿ ನಾನು. ಅವರು ಶೀಘ್ರವೇ ಭಾರತ ತಂಡಕ್ಕೆ ಕಮ್‍ಬ್ಯಾಕ್ ಮಾಡಿ ನಮ್ಮೆಲರ ಜೊತೆಗೆ ಆಡಬೇಕು ಎಂಬುದನ್ನು ನಾನು ಎದುರು ನೋಡುತ್ತಿದ್ದೇನೆ. ಅವರು ಭಾರತ ತಂಡದ ಪರ ಮರಳಿ ಆಡಬೇಕು ಎಂಬುದೇ ನಮ್ಮೆಲ್ಲರ ಬಯಕೆ,” ಎಂದು ಕುಲ್ದೀಪ್ ಹೇಳಿದ್ದಾರೆ.

“ನಾವು ಅಂಗಣಕ್ಕೆ ಇಳಿದಾಗಲೆಲ್ಲಾ ಧೋನಿ ಭಾಯ್ ತಕ್ಷಣಕ್ಕೆ ಒಂದು ಗೇಮ್ ಪ್ಲಾನ್ ಹೇಳಿಕೊಡುತ್ತಿದ್ದರು. ನನ್ನ ವೃತ್ತಿ ಬದುಕಿನಲ್ಲಿ ಅವರು ನೀಡಿದ ಸಲಹೆಗಳು ಬಹಳ ಲಾಭದಾಯಕವಾಗಿದೆ. ತಕ್ಷಣಕ್ಕೆ ಸಲಹೆಗಳನ್ನು ನೀಡುವುದರಲ್ಲಿ ಅವರು ಎತ್ತಿದ ಕೈ. ಪಂದ್ಯಕ್ಕೂ ಮುನ್ನ ಅಥವಾ ಪಂದ್ಯಾನಂತರ ಸಲಹೆ ನೀಡುವ ವ್ಯಕ್ತಿ ಅವರಲ್ಲ. ಪರಿಸ್ಥಿತಿಗಳನ್ನು ಮನಗಂಡು ಆ ಕ್ಷಣಕ್ಕೆ ಆನ್ ಫೀಲ್ಡ್‍ನಲ್ಲೇ ಪರಿಹಾರ ನೀಡುತ್ತಾರೆ,” ಎಂದಿದ್ದಾರೆ.ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ ಎರಡರಲ್ಲೂ ವಿರಾಟ್ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕುಲ್ದೀಪ್, ಕ್ಯಾಪ್ಟನ್ ಕೊಹ್ಲಿ ತಮ್ಮ ಬಹುದೊಡ್ಡ ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ.

“ಮಾಹಿ ಅಪ್ರತಿಮ ಸಲಹೆಗಾರ. ಹಾಗೆಯೇ ವಿರಾಟ್ ಕೊಹ್ಲಿ ಬಹುದೊಡ್ಡ ಸ್ಫೂರ್ತಿ. ಇವರಿಬ್ಬರ ಹೊರತಾಗಿ ರೋಹಿತ್ ಭಾಯ್ ಕೂಡ ಹಲವು ಬಾರಿ ನನಗೆ ನೆರವಾಗಿದ್ದಾರೆ. ವಿರಾಟ್, ಧೋನಿ ಮತ್ತು ರೋಹಿತ್ ಅವರಂತಹ ಹಿರಿಯ ಆಟಗಾರರ ಅಡಿಯಲ್ಲಿ ನಾನು ಆಡುತ್ತಿರುವುದು ಅದೃಷ್ಟವೇ ಸರಿ,” ಎಂದು ಚೈನಾಮನ್ ಸ್ಪಿನ್ನರ್ ಹೇಳಿಕೊಂಡಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter