ರೋಹಿತ್-ಶಿಖರ್ ಜೋಡಿಯ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಇರ್ಫಾನ್

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಅವರ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯ ಹಿಂದಿನ ಕಾರಣ ಪರಸ್ಪರ ಸಾಮಥ್ರ್ಯಕ್ಕೆ ತಕ್ಕಂತೆ ಆಡುವ ಸಾಮಥ್ರ್ಯವಾಗಿದೆ ಎಂದು ಟೀಮ್ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.ರೋಹಿತ್ ಮತ್ತು ಧವನ್ ಆರಂಭಿಕ ಜೋಡಿಯು 2013ರಲ್ಲಿ ಒಟ್ಟಿಗೆ ಬ್ಯಾಟಿಂಗ್ ಆರಂಭಿಸಿದಾಗನಿಂದಲೂ ಸೀಮಿತ ಓವರ್ ಗಳ ವಿಶ್ವ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದೆ.

” ಶಿಖರ್ ಧವನ್ ಭಯಮುಕ್ತವಾಗಿ ಬ್ಯಾಟ್ ಬೀಸುತ್ತಾರೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಈ ಮೂಲಕ ರೋಹಿತ್‍ಗೆ ತಮ್ಮ ಲಯ ಕಂಡುಕೊಳ್ಳಲು ಬೇಕಿರುವ ಅಗತ್ಯದ ಸಮಯವನ್ನು ಅವರು ಒದಗಿಸಿಕೊಡುತ್ತಾರೆ. ಬಳಿಕ ರೋಹಿತ್ ತ್ವರಿತವಾಗಿ ತಮ್ಮ ರನ್ ಗತಿಯ ವೇಗವನ್ನು ಬದಲಾಯಿಕೊಳ್ಳುತ್ತಾರೆ. ಆದರೆ, ಆರಂಭದಲ್ಲಿ ಅವರಿಗೆ ಸಮಯ ಬೇಕು,” ಎಂದು ಸ್ಟಾರ್ ಸ್ಪೋಟ್ರ್ಸ್‍ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಪಠಾಣ್ ಹೇಳಿದ್ದಾರೆ.

“ಕ್ರಿಕೆಟ್‍ನಲ್ಲಿ ಬ್ಯಾಟಿಂಗ್ ವೇಳೆ ಮತ್ತೊಂದು ತುದಿಯಲ್ಲಿ ಆಡುವ ಆಟಗಾರನಿಗೆ ನಿಮ್ಮ ಸಾಮಥ್ರ್ಯ ಮತ್ತು ದೌರ್ಬಲ್ಯದ ಕುರಿತಾಗಿ ಅರಿವಿರಬೇಕು. ರೋಹಿತ್‍ಗೆ ಸಮಯದ ಅಗತ್ಯ ಇದ್ದಾಗ ಧವನ್ ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ರೋಹಿತ್‍ಗೆ ತಮ್ಮ ಲಯ ಕಂಡುಕೊಳ್ಳಲು ಕೆಲ ಸಮಯದ ಅಗತ್ಯವಿರುತ್ತದೆ. ಆಗ ಧವನ್ ರನ್ ರೇಟ್ ಕಾಯ್ದುಕೊಳ್ಳುವ ಜವಾಬ್ದಾರಿ ಹೊತ್ತು ಮುಕ್ತವಾಗಿ ಬ್ಯಾಟ್ ಮಾಡುತ್ತಾರೆ. ಇದು ರೋಹಿತ್ ಅವರ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಬಳಿಕ ಸ್ಪಿನ್ನರ್‍ಗಳ ಆಗಮನ ಹೊತ್ತಿಗೆ ರೋಹಿತ್ ತಮ್ಮ ಲಯದಲ್ಲಿರುತ್ತಾರೆ. ಆಗ ಧವನ್ ಮೇಲಿನ ಒತ್ತಡವನ್ನು ರೋಹಿತ್ ಕಡಿಮೆ ಮಾಡುತ್ತಾರೆ. ಹೀಗಾಗಿ ಈ ಇಬ್ಬರು ಆಟಗಾರರ ನಡುವಣ ಹೊಂದಾಣಿಕೆ ಭಾರತ ತಂಡಕ್ಕೆ ಬಹುದೊಡ್ಡ ಲಾಭ ತಂದುಕೊಟ್ಟಿದೆ,” ಎಂದು ಇರ್ಫಾನ್ ವಿವರಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter