ರಾಹುಲ್ ದ್ರಾವಿಡ್‍ಗೆ ಸಿಗಬೇಕಾದ ಪ್ರಶಂಸೆ ಇನ್ನೂ ಸಿಗಲಿಲ್ಲ: ಪಠಾಣ್

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ರಾಹುಲ್ ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಶ್ರೇಷ್ಠ ಆಟಗಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಬ್ಬ ಬ್ಯಾಟ್ಸ್‍ಮನ್ ಆಗಿ ದ್ರಾವಿಡ್ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ, ಒಬ್ಬ ನಾಯಕನಾಗಿ ಅವರನ್ನು ಗುರುತಿಸಿದ್ದು ತೀರಾ ವಿರಳ. ಟೀಮ್ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್, ರಾಹುಲ್ ದ್ರಾವಿಡ್ ನಾಯಕತ್ವವನ್ನು ಗುಣಗಾನ ಮಾಡಿದ್ದಾರೆ.’ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ನಾಯಕತ್ವವನ್ನು ಶ್ಲಾಘಿಸಿದ ಇರ್ಪಾನ್ ಪಠಾಣ್, ಅತ್ಯಂತ ನಿರ್ಲಕ್ಷ್ಯಗೆ ಒಳಗಾದ ಕ್ರಿಕೆಟಿಗ ಕೂಡ ಇವರೇ ಎಂದು ಹೇಳಿದ್ದಾರೆ. ಮಾಜಿ ನಾಯಕ ತಮ್ಮ ಅದ್ಭುತ ಪ್ರದರ್ಶನದಿಂದ ಸಾಕಷ್ಟು ಪ್ರಶಂಸೆಗೆ ಒಳಗಾಗಿದ್ದಾರೆ. ಆದರೆ ಅವರ ಸಾಧನೆಗೆ ಇದು ಸಾಕಾಗುವುದಿಲ್ಲ. ರಾಹುಲ್ ದ್ರಾವಿಡ್ ಅವರ ನಾಯಕತ್ವಕ್ಕೆ ಸಾಕಷ್ಟು ಮನ್ನಣೆ ಸಿಗಲಿಲ್ಲ ಎಂದು ಆಲ್‍ರೌಂಡರ್ ಬೇಸರ ವ್ಯಕ್ತಪಡಿಸಿದರು.

ರಾಹುಲ್ ದ್ರಾವಿಡ್ ಅವರು 2000 ರಿಂದ 2007ರ ಅವಧಿಯಲ್ಲಿ 79 ಓಡಿಐಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. 2007ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಕರ್ನಾಟಕ ಆಟಗಾರನ ನಾಯಕತ್ವದಲ್ಲಿ ಭಾರತ 42 ಪಂದ್ಯಗಳಲ್ಲಿ ಗೆದ್ದು, 33ರಲ್ಲಿ ಸೋಲು ಅನುಭವಿಸಿದೆ. ಆದರೆ, ಟೆಸ್ಟ್ ಕ್ರಿಕೆಟ್ ನಾಯಕತ್ವದಲ್ಲಿ ದ್ರಾವಿಡ್ ಹೇಳಿಕೊಳ್ಳುವಷ್ಟು ದಾಖಲೆ ಹೊಂದಿಲ್ಲ.”ವಿಶ್ವದಲ್ಲೇ ಅತಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಕ್ರಿಕೆಟಿಗ ಎಂದರೆ ಅದು ರಾಹುಲ್ ದ್ರಾವಿಡ್ ಮಾತ್ರ. ಅವರು ಶೇ.100 ರಷ್ಟು ಅತ್ಯದ್ಭುತ ನಾಯಕ. ತಂಡದಿಂದ ಏನು ಬೇಕು ಎಂಬಂತೆ ಅವರಿಗೆ ಸ್ಪಷ್ಟವಾದ ನಿಲುವಿತ್ತು,” ಎಂದು ಇನ್‍ಸ್ಟಾಗ್ರಾಮ್ ಲೈವ್ ವೀಡಿಯೋ ಚಾಟ್ ಶೀ ‘ಬಿಯಾಂಡ್ ದಿ ಫೀಲ್ಡ್’ ನಲ್ಲಿ ತಿಳಿಸಿದ್ದಾರೆ.

“ಪ್ರತಿಯೊಬ್ಬ ನಾಯಕನಿಗೂ ಅವರದೇ ಆದ ಹಾದಿ ಇರುತ್ತದೆ. ಅದರಲ್ಲಿ ಕೆಲ ನಾಯಕರು ವಿಭಿನ್ನವಾಗಿ ಆಲೋಚಿಸುತ್ತಾರೆ. ಇದರಲ್ಲಿ ನಾಯಕನಾಗಿ ವಿಭಿನ್ನವಾಗಿ ಆಲೋಚಿಸುವುದರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಆದರೆ, ಇವರ ಸಂವಹನ ಅತ್ಯಂತ ಸ್ಪಷ್ಟವಾಗಿತ್ತು. ‘ಇದು ನಿಮ್ಮ ಪಾತ್ರ ಮತ್ತು ಅದಕ್ಕೆ ತಕ್ಕಂತೆ ನೀವು ಕೆಲಸ ಮಾಡಬೇಕು’ ಎಂದು ಹೇಳುತ್ತಿದ್ದರು,” ಎಂದು ಇರ್ಫಾನ್ ಪಠಾಣ್ ವಿವರಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter