ತರಬೇತಿ ಆರಂಭಿಸಲು ಕ್ರಿಕೆಟ್ ದಕ್ಷಿಣ ಆಫ್ರಿಕಾಕ್ಕೆ ಸೂಚನೆ

Share on facebook
Share on twitter
Share on linkedin
Share on whatsapp
Share on email

ಜೋಹಾನ್ಸ್ ಬರ್ಗ್: ಆಟಗಾರರ ತರಬೇತಿಯನ್ನು ಪುನರಾರಂಭಿಸಲು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‍ಎ) ದೇಶದ ಕ್ರೀಡಾ ಸಚಿವಾಲಯದಿಂದ ಅನುಮೋದನೆ ಪಡೆದಿದೆ.ಕೊರೊನಾ ವೈರಸ್ (ಕೋವಿಡ್ -19) ಸಾಂಕ್ರಾಮಿಕ ರೋಗದಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಎಲ್ಲಾ ಕ್ರೀಡಾ ಸಂಬಂಧಿತ ತರಬೇತಿ ಮತ್ತು ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿತ್ತು. ತರಬೇತಿಯ ಬಗ್ಗೆ ಮರು ಚರ್ಚಿಸಲು ಸಿಎಸ್‍ಎ ಗುರುವಾರ ಸಭೆ ನಡೆಸಲಿದೆ. ಕಳೆದ ವಾರ, ಸಿಎಸ್ಎ ಕ್ರೀಡಾ ಸಚಿವಾಲಯದ ಅನುಮತಿ ನೀಡಲು ಹಿಂದೇಟು ಹಾಕಿದ್ದರಿಂದ ಮೂರು ತಂಡಗಳ ಪ್ರದರ್ಶನ ಪಂದ್ಯವನ್ನು ಮುಂದೂಡಬೇಕಾಯಿತು.

ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ 1,38,000 ಕ್ಕೂ ಹೆಚ್ಚು ಕೊರೊ ವೈರಸ್ (ಕೋವಿಡ್ -19) ಪ್ರಕರಣಗಳು ವರದಿಯಾಗಿವೆ ಮತ್ತು ಈ ವೈರಸ್‍ನಿಂದ 2,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಮಾರ್ಚ್ 15 ರಂದು ಸ್ಥಗಿತಗೊಳಿಸಲಾಗಿತ್ತು.ಆಗಸ್ಟ್‍ನಲ್ಲಿ ನಡೆಯಲಿರುವ ಟಿ 20 ಸರಣಿಗಾಗಿ ಭಾರತ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಲಿದೆ ಎಂದು ಸಿಎಸ್‍ಎ ಆಶಿಸುತ್ತಿದೆ ಆದರೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳಿಂದಾಗಿ ಭಾರತ ಕ್ರಿಕೆಟ್ ತಂಡವು ತರಬೇತಿ ಪ್ರಾರಂಭಿಸುವ ಸಾಧ್ಯತೆ ಕಡಿಮೆ ಇದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter