ರೈಲ್ವೆ ವಲಯದಲ್ಲಿ ಸ್ಯಾನಿಟೇಜರ್ ತಯಾರು

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಹುಬ್ಬಳ್ಳಿ:
ಕೊರೋನಾ ವೈರಸ್ ಹಿನ್ನಲೆಯಲ್ಲಿ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ವಿವಿಧ ವಿಭಾಗಗಳು ಹಾಗೂ ವರ್ಕ್ ಶಾಪ್ ಗಳಲ್ಲಿ ಇದುವರೆಗೆ ಒಟ್ಟು 21.510 ಮಾಸ್ಕ್, 4.317 ಲೀಟರ್ ನಷ್ಟು ಸ್ಯಾನಿಟೇಜರ್ ತಯಾರಿಸಲಾಗಿದೆ.

ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಮೂರು ವಿಭಾಗಗಳು ಹಾಗೂ ಎರಡು ವರ್ಕ್ ಶಾಪ್‍ಗಳಲ್ಲಿ ಕೊರೋನಾ ವೈರಾಣು ಹಿನ್ನಲೆಯಲ್ಲಿ ಸುರಕ್ಷತೆ ಕ್ರಮಗಳ ಘೋಷಣೆ ಆದಾಗಿನಿಂದಲೇ ಮಾಸ್ಕ್ ಸ್ಯಾನಿಟೇಜರ್ ತಯಾರಿಕೆ ಆರಂಭಿಸಲಾಗಿದೆ.

ಹುಬ್ಬಳ್ಳಿ ವರ್ಕ್ ಶಾಪ್ ನಲ್ಲಿ ಇದುವರೆಗೆ 5.570 ಮಾಸ್ಕ್, 2530 ಲೀಟರ್ ಸ್ಯಾನಿಟೇಜರ್ ತಯಾರಿಸಲಾಗಿದೆ. ಅದೇ ರೀತಿ ಹುಬ್ಬಳ್ಳಿ ವಿಭಾಗದಲ್ಲಿ 1.915 ಮಾಸ್ಕ್, 520 ಲೀಟರ್ ಸ್ಯಾನಿಟೇಜರ್, ಬೆಂಗಳೂರು ವಿಭಾಗದಲ್ಲಿ 6.410 ಮಾಸ್ಕ್, 765 ಲೀಟರ್ ಸ್ಯಾನಿಟೇಜರ್, ಮೈಸೂರು ವರ್ಕ್ ಶಾಪ್ ನಲ್ಲಿ 6.030 ಮಾಸ್ಕ್, 480 ಲೀಟರ್ ಸ್ಯಾನಿಟೇಜರ್, ಮೈಸೂರು ವಿಭಾಗದಲ್ಲಿ 1.585 ಮಾಸ್ಕ್, 22 ಲೀಟರ್ ಸ್ಯಾನಿಟೇಜರ್ ತಯಾರಿಸಲಾಗಿದೆ. ತಯಾರಾದ ಮಾಸ್ಕ್ – ಸ್ಯಾನಿಟೇಜರ್ ನ್ನು ನೈರುತ್ಯ ರೈಲ್ವೆ ವಲಯ ಅಡಿಯಲ್ಲಿ ವಿವಿಧ ಸರಕುಗಳನ್ನು ಲೋಡ್ – ಅನ್ ಲೋಡ್ ಮಾಡುವ ಗುತ್ತಿಗೆ ಕಾರ್ಮಿಕರು, ವಿವಿಧ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ರೈಲ್ವೆ ಸುರಕ್ಷತಾ ದಳ ಸಿಬ್ಬಂದಿಗೂ ನೀಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter