ರೈತರ ಹಿತ ಕಾಪಾಡಲು ಪ್ಯಾಕೇಜ್ ಘೋಷಣೆಗೆ ಆಗ್ರಹ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಧಾರವಾಡ : ವಿಶ್ವದಾದ್ಯಂತ ಹರಡುತ್ತಿರುವ ಮಹಮಾರಿ ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜನಜೀವನ ಸ್ತಬ್ಧವಾಗಿದೆ.

ಈ ಹಿನ್ನೆಲೆಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ರೈತ ಸಮುದಾಯ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದು,ತಾವು ಬೆಳೆದ ತರಕಾರಿ ಇತರ ಉತ್ಪನಗಳಿಗೆ ಸರಿಯಾದ ಮಾರುಕಟ್ಟೆ ಸಿಗದೆ ಕಗಾಲಾಗಿ.ಹೀಗಾಗಿ ಈ ಕೂಡಲೇ ಸರ್ಕಾರ ರೈತರ ಹಿತ ಕಾಯಲು ಹಣಕಾಸಿನ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದಿಂದಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೆ ತರುತ್ತಿರುವ ಎಲ್ಲ ನಿರ್ಧಾರಗಳಿಗೆ ರೈತ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.ಆದರೆ ಲಾಕ್ ಡೌನ್ ದಿಂದಾಗಿ ರೈತ ಸಮುದಾಯದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದೆ.

ಬೆಳೆದಿರುವ ತರಕಾರಿ, ಹಣ್ಣು ಹಂಪಲು,ಮೆಣಸಿನಕಾಯಿ ಸೇರಿದಂತೆ ಇತರೆ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ.ನಷ್ಟ ಅನುಭವಿಸುತ್ತಾ ಜೀವನ ನಿರ್ವಣೆ ಮಾಡುವುದು ಕಷ್ಟಕರ ಆಗುತ್ತಿದೆ.ರೈತರ ಉತ್ಪನಗಳಿಗೆ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರು. ಅದು ವ್ಯಾಪಕವಾಗಿ ಜಾರಿಗೆ ಬಂದಿಲ್ಲ,ಈ ಕೂಡಲೇ ಸರ್ಕಾರ ರೈತರ ಹಿತ ಕಾಯಲು ವಿಶ ಪ್ಯಾಕೇಜ್ ಘೋಷಿಸುವಂತೆ ಮನವಿ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಈರಣ್ಣ ಬಳಿಗೇರ,ರಾಜ್ಯ ಕಾರ್ಯದರ್ಶಿ ನಾಗಪ್ಪ ಹುಂಡಿ,ವರ್ಧಮಾನ ಸಂಗೊಳ್ಳಿ, ಗದಿಗೆಪ್ಪ ಬೆಳವಡಿ,ಏಗಪ್ಪ ದಿಂಡಲಕೊಪ್ಪ,ನಾಗಪ್ಪ ಕುರಕುರಿ,ಮಹಾವಿರ ಸಂಗೊಳ್ಳಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter