ಮೌನದೊಳಗಿನ ಮನಸ್ಸು ಕವನ ಲೋಕರ್ಪಾಣೆ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಸಿರುಗುಪ್ಪ: ಸಮಾಜದಲ್ಲಿನ ಶೋಷಣೆಯನ್ನು ವಿರೋಧಿಸಿ ಬಂಡಾಯ ಸಾಹಿತ್ಯ ರೂಪುಗೊಂಡರೆ ನವ್ಯ ಸಮಾಜದ ಪ್ರಾಂಪಂಚಿಕ ಜೀವನವು ಉಂಟುಮಾಡುವ ತಲ್ಲಣಗಳು ಕೂಡ ಕವಿಯ ಕವಿತೆಗೆ ಸಾಲುಗಳಾಗುತ್ತವೆ. ಭಾವನೆಗಳಿಗೆ ಕಾವುಕೊಟ್ಟಾಗ ಕವಿತೆಗಳು ಕವಿಯಿಂದ ಹೊರಬರುತ್ತವೆÉ ಎಂದು ಹೂವಿನ ಹಡಗಲಿಯ ಹಿರಿಯ ಸಾಹಿತಿ ತೋಟದೇವರ ಮಠದ ಶಂಕ್ರಯ್ಯ ತಿಳಿಸಿದರು.

ನಗರದ ಅಭಯಾಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಗುರು ಕೊಟ್ಟೂರೇಶ್ವರ ಪ್ರಕಾಶನ ವತಿಯಿಂದ ಕೆಂಚಪ್ಪ.ಎಂ.ಕೆ. ಅಯ್ಯಾನಹಳ್ಳಿ ರಚಿಸಿರುವ ಮೌನದೊಳಗಿನ ಮನಸ್ಸು ಕವನ ಸಂಕಲನ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ರಾಜರನ್ನು ವೈಭವೀಕರಿಸಲು ಅಂದಿನ ದಿನಗಳಲ್ಲಿ ಕವಿತೆಗಳನ್ನು ಬರೆಯಲಾಗುತಿತ್ತು. ಆಧುನಿಕ ಯುಗದಲ್ಲಿ ಯುವಕರು ಪ್ರಿಯತಮೆಯ ಪ್ರೀತಿಗಾಗಿ ಕವನಗಳನ್ನು ರಚಿಸಿದರೆ, ಪ್ರಿಯತಮೆ ಕೈಕೊಟ್ಟಾಗ ಉಂಟಾಗುವ ವಿರಹ ವೇದನೆಯು ಕೂಡ ಕವನಗಳಾಗಿ ರೂಪುಗೊಳ್ಳುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕವಿಗೋಷ್ಠಿಗಳನ್ನು ಕವಿತಾ ವಾಚನಗಳನ್ನು ನಡೆಸಲಾಗುತ್ತದೆ. ಆದರೆ ಕವಿತೆಗಳು ಸಮಾಜದ ಕನ್ನಡಿಯಾಗಬೇಕಾದರೆ ಕವಿ ತಾನು ಕಂಡುಕೊಂಡ ಸತ್ಯವನ್ನು, ಬಡತನದಲ್ಲಿ ಕಂಡ ಹಸಿವಿನ ಬೇಗೆಯ ಕಷ್ಟಗಳನ್ನು ನಿಷ್ಠೂರವಾಗಿ ತನ್ನ ಸಾಹಿತ್ಯದಲ್ಲಿ ಮೂಡಿಸಿದಾಗ ಮಾತ್ರ ಕವನಗಳಿಗೆ ನಿಜವಾದ ಮೌಲ್ಯ ದೊರೆಯುತ್ತದೆ . ಕವಿ ಭಾವಜೀವಿಯಾಗಿದ್ದು, ಮುಗ್ದನಾಗಿರುತ್ತಾನೆ, ಕವಿ ಸ್ವತಂತ್ರ ಜೀವಿಯಾಗಿದ್ದು, ಎಲ್ಲಾ ಕಾಲದಲ್ಲಿಯೂ ಸಲ್ಲುವವನಾಗಿದ್ದಾನೆಂದು ಹೇಳಿದರು.

ತಹಶೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ ಕನ್ನಡ ಭಾಷೆಗೆ ತನ್ನದೇ ಆದ ಪ್ರಾಚೀನತೆ ಇದ್ದು, ಹಳೆಗನ್ನಡ, ನಡುಗನ್ನಡ, ಆಧುನಿಕ ಕನ್ನಡ ಭಾಷೆಗಳಲ್ಲಿ ಕವಿಗಳು ಕನ್ನಡ ಭಾಷೆಯನ್ನು ಬಳಸಿ ಮೇರು ಕೃತಿಗಳನ್ನು ರಚಿಸಿ ಜಗತ್ತಿಗೆ ನೀಡಿದ್ದು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಸರ್ಕಾರಿ ನೌಕರರು ದುಶ್ಚಟಗಳಿಗೆ ಬಲಿಯಾಗದೆ ಬಿಡುವಿನ ಸಮಯದಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸೃಜನಾತ್ಮಕತೆಯನ್ನು ಬೆಳಸಿಕೊಂಡಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ನಂತರ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ತಮ್ಮ ಕವಿತೆಗಳನ್ನು ಕವಿಗೋಷ್ಠಿಯಲ್ಲಿ ವಾಚಿಸಿದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ವಿಶ್ವನಾಥ, ಕ.ಸಾ.ಪ. ತಾ.ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಕರೂರು ಹೋಬಳಿ ಘಟಕದ ಅಧ್ಯಕ್ಷ ವಿರುಪಾಕ್ಷಿಗೌಡ, ಜಿಲ್ಲಾ ಸಂಚಾಲಕ ಎಂ.ಪಂಪಾಪತಿ, ವೀರಭದ್ರಪ್ಪ ದರೂರು, ಎಲ್‍ರುದ್ರಮುನಿ ದರೂರು, ರೇಣುಕಮ್ಮಾ, ನಾಗರಾಜ ಮಸೂತಿ, ರಾಮಪ್ಪ, ದೊಡ್ಡಬಸಪ್ಪರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.

ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಎಂ.ಪಿ.ಪ್ರಕಾಶ್ ಪ್ರಶಸ್ತಿಯನ್ನು ಹೂವಿನ ಹಡಗಲಿಯ ಹಿರಿಯಸಾಹಿತಿ ತೋಟದೇವರ ಮಠದ ಶಂಕ್ರಯ್ಯ, ಮುದೇನೂರು ಸಂಗಜ್ಜ ಪ್ರಶಸ್ತಿಯನ್ನು ಇಟಿಗಿಯ ಹಿರಿಯ ಸಾಹಿತಿ ಹಾಲಪ್ಪ ಚಿಗಟೇರಿ, ಸಾಹಿತ್ಯ ಸೇವಾಶ್ರಿ ಪ್ರಶಸ್ತಿಯನ್ನು ಕುರುಗೋಡಿನ ಸಾಹಿತಿ ಕೆ.ವೀರಭದ್ರಗೌಡ, ಚಳ್ಳಕೇರಿಯ ಕಾದಂಬರಿಕಾರ ರಾಜು ಸೂಲೆನ ಹಳ್ಳಿ, ಮರಿದಾಸನ ಹಳ್ಳಿಯ ಸಾಹಿತಿ ಮೂರ್ಕಣ್ಣಪ್ಪ.ಎಸ್. ಸಾಹಿತ್ಯ ಸೇವಾ ವಿಭೂಷಣ ಪ್ರಶಸ್ತಿಯನ್ನು ಕಿನ್ಹಾಳದ ಸಾಹಿತಿ ಶ್ರೀನಿವಾಸ ಚಿತ್ರಗಾರ್‍ರವರಿಗೆ ಕೊಟ್ಟೂರಿನ ಇಂದು ಕಾಲೇಜಿನ ಪ್ರಾಚಾರ್ಯ ಹೆಚ್.ಎನ್.ವೀರಭದ್ರಪ್ಪ ಪ್ರಧಾನ ಮಾಡಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter