ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ’ ಹಾಡಿಗೆ ಯೋಗಿ ಹೆಜ್ಜೆ

ಬೆಂಗಳೂರು: ಕೆ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ನಿರ್ಮಿಸುತ್ತಿರುವ ಕೊಡೆ ಮುರುಗ ಚಿತ್ರದ ಹಾಡಿಗೆ ಲೂಸ್ ಮಾದ ಯೋಗಿ ಹೆಜ್ಜೆ ಹಾಕಿದ್ದಾರೆ ಸುಬ್ರಮಣ್ಯ ಪ್ರಸಾದ್ ಅವರು ಬರೆದಿರುವ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ಎಂಬ ಹಾಡಿನಲ್ಲಿ ಯೋಗಿ ಅಭಿನಯಿಸಿದ್ದಾರೆ

ಲೂಸ್ ಮಾದ ಯೋಗಿ ಹಾಗೂ ಮುನಿಕೃಷ್ಣ ನಟಿಸಿರುವ ಈ ಹಾಡಿಗೆ ಸ್ಟಾರ್ ಗಿರಿ ನೃತ್ಯ ನಿರ್ದೇಶನ ಮಾಡಿದ್ದಾರೆ ಕೈಲಾಶ್ ಖೇರ್ ಈ ಹಾಡನ್ನು ಹಾಡಿದ್ದಾರೆ

ಸುಬ್ರಮಣ್ಯ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಅವರ ಛಾಯಾಗ್ರಹಣವಿದೆ. ತ್ಯಾಗರಾಜ್ ಸಂಗೀತ ನಿರ್ದೇಶನ, ಸಿ.ರವಿಚಂದ್ರನ್ ಸಂಕಲನ, ಭೂಷಣ್, ಸ್ಟಾರ್ ಗಿರಿ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ, ಸ್ವಾತಿ ಗುರುದತ್, ಅರವಿಂದ ರಾವ್, ಅಸೋಕ್ ಶರ್ಮ, ರಾಕ್‍ಲೈನ್ ಸುಧಾಕರ್, ಸ್ವಯಂವರ ಚಂದ್ರು, ಮೋಹನ್ ಜುನೇಜ, ಕುರಿ ಪ್ರತಾಪ್, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅತಿಥಿ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.