ಕೋರೋನಾ ಪೀಡಿತ ಮಕ್ಕಳ ಆರೈಕೆಗೆ ತಾಯಿಗೆ ಅವಕಾಶ

Share on facebook
Share on twitter
Share on linkedin
Share on whatsapp
Share on email

ಹುಬ್ಬಳ್ಳಿ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿಯಾಗಿತ್ತು. ಒಂದೇ ಕುಟುಂಬದ ಐದು ಜನರಲ್ಲಿ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ ಮೂವರು ಮಕ್ಕಳು ಕೂಡ ಚಿಕಿತ್ಸೆ ಪಡೆಯುತ್ತಿ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡು ತಾಯಿ ಹಾಗೂ ಮಕ್ಕಳನ್ನು ಒಂದುಗೂಡಿಸಿದೆ.
ಕೊರೊನಾ ದೃಢಪಟ್ಟು ನಗರದ ಕಿಮ್ಸಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಳೇ ಹುಬ್ಬಳ್ಳಿಯ ಓಣಿಯ ಮೂವರು ಮಕ್ಕಳ ಜೊತೆ ತಂಗಲು ಸೋಂಕು ಇಲ್ಲದ ಅವರ ತಾಯಿಗೆ ಜಿ¯್ಲÁಡಳಿತ ಅವಕಾಶ ಕಲ್ಪಿಸಿದ್ದು, ತಾಯಿ ಹಾಗೂ ಮಕ್ಕಳನ್ನು ಒಟ್ಟಿಗೆ ಸೇರಿಸಿದೆ.

ಸೋಂಕು ಇರುವುದು ಖಚಿತವಾಗಿರುವ ರೋಗಿ ಹಾಗೂ ಅವರ ಅಣ್ಣನಿಗೆ ಮೂವರು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಅದರಲ್ಲೂ ಮೂರೂವರೆ ಮತ್ತು ಐದು ವರ್ಷದ ಮಕ್ಕಳನ್ನು ಸಮಾಧಾನಪಡಿಸಲು ವೈದ್ಯರು ಹಾಗೂ ಸಿಬ್ಬಂದಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದರಿಂದ ಅವರ ತಾಯಿ, ಮಕ್ಕಳೊಂದಿಗೆ ಇರಲು ಅನುಮತಿ ಕೊಡುವಂತೆ ವೈದ್ಯರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.

ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ ಬಳಿಕ ಕಿಮ್ಸï ವೈದ್ಯರು ಮಕ್ಕಳೊಂದಿಗೆ ಇರಲು ತಾಯಿಗೆ ಅವಕಾಶ ಮಾಡಿಕೊಟ್ಟಿ. ಆ ತಾಯಿಗೆ ವೈಯಕ್ತಿಕ ಸುರಕ್ಷಿತಾ ಸಾಧನ, ಕೈ ಗ್ಲೌಸ್ ಮತ್ತು ಮಾಸ್ಕï ನೀಡಲಾಗಿದೆ. ಸೋಂಕಿನ ಬಗ್ಗೆ ಜಾಗೃತೆ ವಹಿಸಲು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter