ಕಟ್ಟಡ ಕಾಮಗಾರಿಗೆ ಚಾಲನೆ

ಕಟ್ಟಡ ಕಾಮಗಾರಿಗೆ ಚಾಲನೆ

ಬೆಳಗಾಯಿತು ವಾರ್ತೆ
ಹೊಸಪೇಟೆ : ನಗರದ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಹೊಸಪೇಟೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ವಕೀಲರ ಸಂಘ ಕಟ್ಟಡದ 1ನೇ ಮತ್ತು 2ನೇ ಮಹಡಿ ಕಟ್ಟಡದ ಕಾಮಗಾರಿಗೆ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕೂನ್ಹಾ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ. ಟಿ. ಕಟ್ಟಿಮನಿ, ನ್ಯಾಯಾಧೀಶ ಕೆ. ಎಂ. ರಾಜಶೇಖರ್, ವಕೀಲರ ಸಂಘದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ವಕೀಲ ಪರಿಷತ್ ಅಧ್ಯಕ್ಷ ಕೆ. ಬಿ. ನಾಯಕ, ಸದಸ್ಯರಾದ ಜೆ. ಎಂ. ಅನಿಲ್ ಕುಮಾರ್, ಕೆ. ಕೋಟೇಶ್ವರ ರಾವ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಕೊಟ್ರಗೌಡ, ಸಂಘದ ಪದಾಧಿಕಾರಿಗಳು ಮತ್ತು ಇನ್ನಿತರರು ಇದ್ದರು

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.